July 13, 2026
Monday, July 13, 2026
spot_img

ವಸತಿ ಶಾಲೆಯಲ್ಲಿ ಹೈಡ್ರಾಮಾ! ವಿದ್ಯಾರ್ಥಿಗಳ ಗಲಾಟೆ ತಡೆಯಲು ಹೋದ ಪ್ರಾಂಶುಪಾಲ, ಉಪನ್ಯಾಸಕರ ಮೇಲೆಯೇ ಹಲ್ಲೆ

ಹೊಸದಿಗಂತ ವರದಿ ಮುಂಡಗೋಡ:

ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ಕೊಠಡಿ ಒಳಗೆ ನುಗ್ಗಿ ಪಿಯುಸಿ ಕಾಲೇಜ ವಿದ್ಯಾರ್ಥಿಗಳ ಮೇಲೆ ಹಾಗೂ ಜಗಳ ಬಿಡಿಸಲು ಹೋದ ಪ್ರಾಂಶುಪಾಲ ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಕಾಲೇಜಿನ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ.

ಇದೇ ವಸತಿ ಶಾಲೆಯ 9 ತರಗತಿಯ ವಿದ್ಯಾರ್ಥಿಯ ಮೇಲೆ ಪಿಯು ಕಾಲೇಜ ವಿದ್ಯಾರ್ಥಿಗಳು ರವಿವಾರ ರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಹಾಗೂ ಉಪನ್ಯಾಸಕರ ಸಮ್ಮುಖದಲ್ಲಿ ಗಲಾಟೆ ಮಾಡಿಕೊಂಡ ವಿದ್ಯಾರ್ಥಿಗಳ ಬಳಿ ಗಲಾಟೆ ಬಗ್ಗೆ ಚರ್ಚಿಸುತ್ತಿರುವಾಗ. ಯಾರ ಅನುಮತಿ ಇಲ್ಲದೆ 9ನೇ ತರಗತಿ ವಿದ್ಯಾರ್ಥಿಯ ಪಾಲಕರು ಮತ್ತು ಅವರ ಜೊತೆ ಬಂದವರು ಅಕ್ರಮವಾಗಿ ಕಾಲೇಜಿನ ಕೊಠಡಿ ಒಳಗೆ ನುಗ್ಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಈ ವೇಳೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ತಡೆದರು ಸಹ ಉಳಿದ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ಅಶಾಂತಿ ಉಂಟಾಗಿ ಶಾಲೆಯ ವಾತಾವರಣಕ್ಕೆ ಅಡ್ಡಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಸತಿ ಶಾಲೆಯ ಪ್ರಾಂಶುಪಾಲ ಆನಂದ ಚಿಕ್ಕೊಡಿಯವರು ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !