July 14, 2026
Tuesday, July 14, 2026
spot_img

SNACKS| ಸಂಜೆ ಸ್ನಾಕ್ಸ್‌ಗೆ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ಸಿದ್ರೆ..ಜಸ್ಟ್ 5 ನಿಮಿಷದಲ್ಲೇ ರೆಡಿಯಾಗುತ್ತೆ ಈ ಬೋಂಡಾ

ಸಂಜೆ ಸ್ನಾಕ್ಸ್‌ಗೆ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ಸಿದ್ರೆ, ಮನೆಯಲ್ಲಿ ಹಣ್ಣಾದ ಬಾಳೆಹಣ್ಣು ಇದ್ರೆ ಸಾಕು ಈ ಸ್ನಾಕ್ಸ್‌ ಮಾಡಬಹುದು. ಹೊರಗಡೆ ಗರಿಗರಿಯಾಗಿ, ಒಳಗಡೆ ಸಾಫ್ಟ್ ಆಗಿರೋ ಈ ಸೂಪರ್ ಟೇಸ್ಟಿ ಸಿಹಿ ಬೋಂಡಾವನ್ನ ಕೇವಲ 5 ನಿಮಿಷದಲ್ಲಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು

ಗೋಧಿ ಹಿಟ್ಟು

ಬೆಲ್ಲದ ಪುಡಿ

 ಏಲಕ್ಕಿ ಪುಡಿ:

ತೆಂಗಿನಕಾಯಿ

ಅಡುಗೆ ಸೋಡಾ

ಉಪ್ಪು

ಎಣ್ಣೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಬಾಳೆಹಣ್ಣುಗಳನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಿವುಚಿಕೊಳ್ಳಬೇಕು. ಅದಕ್ಕೆ ಬೆಲ್ಲದ ಪುಡಿ ಹಾಕಿ, ಬೆಲ್ಲ ಕರಗುವರೆಗೂ ಚೆನ್ನಾಗಿ ಮಿಕ್ಸ್ ಮಾಡಿ.ಬಳಿಕ  ಗೋಧಿ ಹಿಟ್ಟು, ಏಲಕ್ಕಿ ಪುಡಿ, ಕಾಯಿ ಚೂರು, ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್‌ ಮಾಡಬೇಕು. ನಂತರ ಬಾಂಡಲಿಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಕಾದ ನಂತರ ಉರಿಯನ್ನು ಮಧ್ಯಮ ಹದದಲ್ಲಿಡಿ. ಕೈಯನ್ನು ಸ್ವಲ್ಪ ನೀರಿನಲ್ಲಿ ಅದ್ದಿ, ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಎಣ್ಣೆಗೆ ಬಿಡಬೇಕು. ಬೋಂಡಾಗಳು ಒಳಗಿನಿಂದ ಚೆನ್ನಾಗಿ ಬೇಯಲು ತಿರುಗಿಸಿ ಹಾಕಬೇಕು, ಕಡು ಚಿನ್ನದ ಬಣ್ಣ ಬರುವವರೆಗೆ ಕರಿದು ತೆಗೆದರೆ. ಬಿಸಿಬಿಸಿಯಾದ ಬಾಳೆಹಣ್ಣಿನ ಸಿಹಿ ಬೋಂಡಾ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !