August 31, 2026
Monday, August 31, 2026
spot_img

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಸಾಲಬಾಧೆ ತಾಳಲಾರದೇ ರೈತ ಆತ್ಮ*ಹತ್ಯೆ!

ಹೊಸದಿಗಂತ ವರದಿ ಮುಂಡಗೋಡ

ಮುಂಡಗೋಡ: ಸಾಲಬಾಧೆ ತಾಳಲಾರದೇ ತಾಲೂಕಿನ ಹುನಗುಂದ ಗ್ರಾಮದ ರೈತನೊಬ್ಬ ತನ್ನ ಗದ್ದೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

 ಹುನಗುಂದ ಗ್ರಾಮದ ಫಕ್ಕೀರಗೌಡ  ಪಾಟೀಲ್ (42) ಎಂಬಾತನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಗೋವಿನ ಜೋಳ, ಕಬ್ಬು ಮತ್ತು ಅಡಿಕೆ ಬೆಳೆಯಲು ಹುನಗುಂದ ಸೊಸೈಟಿಯಲ್ಲಿ 3,75,000 ರೂ ಬೆಳೆ ಸಾಲ ಮತ್ತು ಪಟ್ಟಣದ ಬಸವೇಶ್ವರ ಬ್ಯಾಂಕಿನಲ್ಲಿ 1,08,000 ರೂ ಸಾಲ ಮಾಡಿಕೊಂಡಿದ್ದನು.ಕಳೆದ ವರ್ಷ ಬೆಳೆ ಸರಿಯಾಗಿ ಬಾರದೇ ಮತ್ತು ಪ್ರಸಕ್ತ ವರ್ಷದಲ್ಲಿ ಮತ್ತೇ ಅಡಿಕೆ ತೋಟ, ಗೋವಿನ ಜೊಳ, ಕಬ್ಬು ಬೆಳೆಗೆ ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ, ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂಬ ಭಯದಲ್ಲಿ ಮನನೊಂದು ಗದ್ದೆಯಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪ್ರೇಮಾ ಇಲ್ಲಿನ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  

ಇದನ್ನೂ ಓದಿ:

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !