July 18, 2026
Saturday, July 18, 2026
spot_img

ತಂದೆ ಸಿಎಂ ಆದ್ರೂ ಸ್ವಂತ ಬಲದಿಂದಲೇ ಡೈರೆಕ್ಟರ್ ಆದ್ರಾ ವಿಜಯ್ ಪುತ್ರ ಜೇಸನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಸಿಎಂ ಮತ್ತು ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿದ್ದಾರೆ. ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನದ ಚರ್ಚೆಗಳ ಬೆನ್ನಲ್ಲೇ ಜೇಸನ್ ತಂದೆಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಂದೆಯ ಹೆಸರನ್ನು ಕೈಬಿಟ್ಟು ಸಿಟ್ಟು ಹೊರಹಾಕಿದ್ದ ಜೇಸನ್, ಈಗ ಎಲ್ಲ ಕುತೂಹಲಗಳಿಗೂ ತೆರೆ ಎಳೆದಿದ್ದಾರೆ.

ಕುಟುಂಬದ ಬೆಂಬಲ ಮತ್ತು ಸಿನಿಮಾ ಆಯ್ಕೆ

ವಿಕಟನ್ ಸಂದರ್ಶನದಲ್ಲಿ ಮಾತನಾಡಿದ ಜೇಸನ್, “ನಾನು ಸಿನಿಮಾ ನಿರ್ದೇಶನ ಮಾಡಲು ಬಯಸಿದಾಗ ನನ್ನ ತಂದೆ, ತಾಯಿ ಸಂಗೀತಾ ಮತ್ತು ಸಹೋದರಿ ನನಗೆ ಭರಪೂರ ಬೆಂಬಲ ನೀಡಿದರು. ನಾವೆಲ್ಲರೂ ಚರ್ಚಿಸಿಯೇ ಈ ಹಾದಿ ಆರಿಸಿಕೊಂಡಿದ್ದೇವೆ. ನನ್ನ ಫ್ಯಾಮಿಲಿ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದೆ” ಎಂದು ಹಂಚಿಕೊಂಡಿದ್ದಾರೆ. ಆದರೆ, ಸಿನಿಮಾ ರಂಗದಲ್ಲಿ ತಮಗೆ ತಂದೆಯಿಂದ ಯಾವುದೇ ನೇರ ಸಹಾಯ ಸಿಕ್ಕಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.

ಶಾರ್ಟ್ ಫಿಲ್ಮ್‌ನಿಂದ ಬೆಳ್ಳಿಪರದೆಯವರೆಗೆ

ಜೇಸನ್ ಕೆನಡಾದಲ್ಲಿ ಸಿನಿಮಾ ಶಿಕ್ಷಣ ಪಡೆಯುತ್ತಿದ್ದಾಗ ಬರೆದಿದ್ದ 120 ಪುಟಗಳ ಕಥೆಯನ್ನು ಮೊದಲು 20 ನಿಮಿಷಗಳ ಕಿರುಚಿತ್ರವಾಗಿ ಮಾಡಿದ್ದರು. ಭಾರತಕ್ಕೆ ಮರಳಿದ ನಂತರ ತಮ್ಮದೇ ಕಥೆಯೊಂದನ್ನು ಸಿದ್ಧಪಡಿಸಿದರು. ತಮ್ಮ ಅಂಕಲ್ ಸಂಜೀವ್ ಅವರ ಮೂಲಕ ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸಂಪರ್ಕಿಸಿ ಕಥೆ ಒಪ್ಪಿಸುವಲ್ಲಿ ಯಶಸ್ವಿಯಾದರು.

ರಿಲೀಸ್‌ಗೆ ಸಜ್ಜಾದ ‘ಸಿಗ್ಮಾ’

ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ನಾಯಕನಾಗಿ ನಟಿಸಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದಲ್ಲಿ ಜೇಸನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !