ಬೆಳಗಿನ ಆರಂಭಕ್ಕೆ ಅಥವಾ ಸಂಜೆ ರಿಫ್ರೆಶ್ ಆಗೋಕೆ ವಿಭಿನ್ನ ರುಚಿಯ ಕಾಫಿ ಬೇಕಾ? ಹಾಗಿದ್ರೆ ಈ ಪ್ರೊಟೀನ್‌ಭರಿತ ಪೀನಟ್ ಬಟರ್ ಕಾಫಿ ಟ್ರೈ ಮಾಡಿ. ಕೇವಲ 5 ನಿಮಿಷಗಳಲ್ಲಿ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ಹಾಲು – 1 ಕಪ್
ಪೀನಟ್ ಬಟರ್ – 1 ರಿಂದ 2 ಚಮಚ
ಕಾಫಿ ಪುಡಿ – 1 ಚಮಚ
ಸಕ್ಕರೆ ಅಥವಾ ಜೇನುತುಪ್ಪ – 1 ಚಮಚ
ಬಿಸಿ ನೀರು – 2 ರಿಂದ 3 ಚಮಚ
ಐಸ್ ಕ್ಯೂಬ್ಸ್ – ಬೇಕಾದಷ್ಟು
ಮಾಡುವ ವಿಧಾನ
ಒಂದು ಸಣ್ಣ ಬಟ್ಟಲಿನಲ್ಲಿ ಕಾಫಿ ಪುಡಿ, ಸಕ್ಕರೆ ಮತ್ತು ಬಿಸಿ ನೀರನ್ನು ಹಾಕಿ ಚೆನ್ನಾಗಿ ಕರಗುವಂತೆ ಮಿಶ್ರಣ ಮಾಡಿ.
ಹಾಲಿಗೆ ಪೀನಟ್ ಬಟರ್ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಕದಡಿ.
ಈಗ ಈ ಹಾಲಿಗೆ ತಯಾರಿಸಿದ ಕಾಫಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ.
ಬಿಸಿ ಬಿಸಿಯಾಗಿ ಕುಡಿಯಬಹುದು. ತಣ್ಣನೆಯ ಕಾಫಿ ಬೇಕಾದರೆ ಎಲ್ಲವನ್ನೂ ಮಿಕ್ಸರ್ ಜಾರಿಗೆ ಹಾಕಿ, ಐಸ್ ಕ್ಯೂಬ್ಸ್ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.



