July 18, 2026
Saturday, July 18, 2026
spot_img

ಚೀನಾದಲ್ಲಿ ಪ್ರಕೃತಿಯ ರೌದ್ರನರ್ತನ: ಭೀಕರ ಭೂಕುಸಿತಕ್ಕೆ 8 ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಚಾಂಗ್‌ಕಿಂಗ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಭಾರೀ ಅನಾಹುತಕ್ಕೆ ಕಾರಣವಾಗಿದೆ. ದುರಂತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 34ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಮನೆಗಳ ಮೇಲೆ ಕುಸಿದ ಬೆಟ್ಟ

ನಿರಂತರ ಮಳೆಯಿಂದ ಬೆಟ್ಟದ ದೊಡ್ಡ ಭಾಗ ಕುಸಿದು ವಸತಿ ಪ್ರದೇಶಗಳ ಮೇಲೆ ಬಿದ್ದ ಪರಿಣಾಮ ಹಲವು ಮನೆಗಳು ಮಣ್ಣಿನಡಿ ಹೂತುಹೋಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಕ್ಷಣಾ ಕಾರ್ಯಾಚರಣೆ ವೇಗ

ಸೇನೆ, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಬುಲ್ಡೋಜರ್‌ ಮತ್ತು ವಿಶೇಷ ಯಂತ್ರಗಳ ಸಹಾಯದಿಂದ ಅವಶೇಷ ತೆರವುಗೊಳಿಸುತ್ತಿದ್ದಾರೆ. ಡ್ರೋನ್‌ ಹಾಗೂ ಶ್ವಾನದಳಗಳ ನೆರವಿನಿಂದ ನಾಪತ್ತೆಯಾದವರ ಶೋಧ ಮುಂದುವರಿದಿದೆ.

ಇದನ್ನೂ ಓದಿ:

ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್, ನೀರು ಮತ್ತು ಅನಿಲ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.

ಇನ್ನಷ್ಟು ಅಪಾಯದ ಎಚ್ಚರಿಕೆ

ಪ್ರದೇಶದಲ್ಲಿ ಇನ್ನೂ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !