ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಜನಪ್ರಿಯ ಕ್ವಿಜ್ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ (KBC) ತನ್ನ 18ನೇ ಸೀಸನ್‌ನೊಂದಿಗೆ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೊಸ ಸೀಸನ್‌ಗಾಗಿ ಬಿಡುಗಡೆಯಾದ ಪ್ರೋಮೊ ಈಗಾಗಲೇ ಕುತೂಹಲ ಮೂಡಿಸಿದ್ದು, ಈ ಬಾರಿಯ ಆಟದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದೆ.
ಮತ್ತೆ ಅಮಿತಾಬ್ ನಿರೂಪಣೆ
ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರೇ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:
ಆಟದಲ್ಲಿ ಹೊಸ ಟ್ವಿಸ್ಟ್
ಈ ಬಾರಿ ಸ್ಪರ್ಧಿಗಳು ಕೇವಲ ಸರಿಯಾದ ಉತ್ತರ ನೀಡಿದರೆ ಸಾಕಾಗುವುದಿಲ್ಲ. ಉತ್ತರದ ಹಿಂದಿನ ಯೋಚನೆ ಮತ್ತು ತಾರ್ಕಿಕತೆಯೂ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರೋಮೊದಲ್ಲಿ ತಿಳಿಸಲಾಗಿದೆ.
ಯಾವಾಗ ಆರಂಭ?
KBC 18 ಆಗಸ್ಟ್ 10ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ದೂರದರ್ಶನದ ಜೊತೆಗೆ ಡಿಜಿಟಲ್ ವೇದಿಕೆಯಲ್ಲೂ ವೀಕ್ಷಿಸಲು ಅವಕಾಶ ಇರಲಿದೆ.
2000ರಲ್ಲಿ ಆರಂಭವಾದ ಈ ಜನಪ್ರಿಯ ಕಾರ್ಯಕ್ರಮ ಈಗ 18ನೇ ಸೀಸನ್‌ಗೆ ಕಾಲಿಟ್ಟಿದೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕಿರುತೆರೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿರುವ ಈ ಶೋ ಮತ್ತೊಮ್ಮೆ ವೀಕ್ಷಕರ ಮನಗೆಲ್ಲುವ ನಿರೀಕ್ಷೆಯಲ್ಲಿದೆ.



