November 1, 2026
Sunday, November 1, 2026
spot_img

ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಲು ಯತ್ನ: ಬಂಡೆ ಕಲ್ಲಿಗೆ ತಲೆ ಬಡಿದು ಚಾಲಕನ ದುರ್ಮ*ರಣ

ಹೊಸದಿಗಂತ ವರದಿ ಮಡಿಕೇರಿ:

ನಿಯಂತ್ರಣ ತಪ್ಪಿದ ಲಾರಿಯಿಂದ ಜಿಗಿದ ಚಾಲಕನ ತಲೆ ಬಂಡೆ ಕಲ್ಲುಗಳಿಗೆ ಅಪ್ಪಳಿಸಿ ಸಾವನ್ನಪ್ಪಿರುವ ಘಟನೆ ಕುಶಾಲನಗರ ತಾಲೂಕಿನ ಅರೆಗಲ್ಲು ಕಲ್ಲುಕೋರೆಯಲ್ಲಿ‌ ಭಾನುವಾರ ಮಧ್ಯಾಹ್ನ ನಡೆದಿದೆ.

ಕುಶಾಲನಗರದ ಟೌನ್ ಕಾಲನಿ ನಿವಾಸಿ ಆರ್ಮುಗಂ ಅವರ ಪುತ್ರ ವಿನ್ಸೆಂಟ್ (35) ಎಂಬವರೇ ಮೃತ ದುರ್ದೈವಿ.

ಕುಶಾಲನಗರ ಸಮೀಪದ ತೊರೆನೂರಿನ ಅರೆಗಲ್ಲು ಕೋರೆಯಲ್ಲಿ ಕಲ್ಲು ತುಂಬಿದ ಲಾರಿ ಚಾಲನೆ ಮಾಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಸುಮಾರು 25 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ಸಂದರ್ಭ ಅದರಲ್ಲಿದ್ದ ಚಾಲಕ ವಿನ್ಸೆಂಟ್ ಪ್ರಾಣ ಭಯದಿಂದ ಲಾರಿಯಿಂದ ಜಿಗಿದಿದ್ದಾರೆ. ಆದರೆ ದುರದೃಷ್ಟವಶಾತ್ ಕಂದಕದಲ್ಲಿದ್ದ ಬಂಡೆ ಕಲ್ಲುಗಳಿಗೆ ತಲೆ ಅಪ್ಪಳಿಸಿ ದುರ್ಮರಣಕ್ಕೀಡಾಗಿದ್ದಾರೆ.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

Skip to toolbar