July 20, 2026
Monday, July 20, 2026
spot_img

ಕೊನೆಯ ಚಿತ್ರ ‘ಜನ ನಾಯಗನ್’ನಲ್ಲಿ ಬಿಗ್ ಟ್ವಿಸ್ಟ್: ದಳಪತಿ ವಿಜಯ್ ಫ್ಯಾನ್ಸ್‌ಗೆ ಸರ್ಪ್ರೈಸ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಅತ್ಯಂತ ಬಹುನಿರೀಕ್ಷಿತ ಹಾಗೂ ಅವರ ಕೆರಿಯರ್‌ನ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ಜಾಗತಿಕವಾಗಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಆದರೆ, ಬಿಡುಗಡೆಗೂ ಮುನ್ನವೇ ಈ ಸಿನಿಮಾ ಹಲವು ರೋಚಕ ತಿರುವುಗಳನ್ನು ಪಡೆದುಕೊಂಡಿದೆ.

ಸೆನ್ಸಾರ್ ಗಲಾಟೆ ಮತ್ತು ಲೀಕ್ ಸಂಕಷ್ಟ

ಕಳೆದ ಏಪ್ರಿಲ್ ತಿಂಗಳಲ್ಲಿ ಈ ಚಿತ್ರದ ಎಚ್‌ಡಿ ಪ್ರಿಂಟ್ ಅಂತರ್ಜಾಲದಲ್ಲಿ ಸೋರಿಕೆಯಾಗಿ ಚಿತ್ರತಂಡಕ್ಕೆ ಆಘಾತ ನೀಡಿತ್ತು. ಇದರ ಜೊತೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಜೊತೆಗೂ ದೊಡ್ಡ ಕಾನೂನು ಹೋರಾಟ ನಡೆಸಬೇಕಾಯಿತು. ಈ ಎಲ್ಲಾ ಅಡೆತಡೆಗಳ ನಂತರ, ಚಿತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಚಿತ್ರಪ್ರೇಮಿಗಳಿಗೆ ಸಂಪೂರ್ಣ ಹೊಸ ಅನುಭವ

ಕನ್ನಡಿಗ ಕೆ. ವೆಂಕಟ್ ನಾರಾಯಣ್ ಅವರ ಹೆಮ್ಮೆಯ ‘ಕೆವಿಎನ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕರು, “ಸಿನಿಮಾ ಲೀಕ್ ಆದ ನಂತರ ನಾವು ಸುಮ್ಮನೆ ಕೂರಲಿಲ್ಲ. ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಫೀಲ್ ನೀಡಲು ಚಿತ್ರದಲ್ಲಿ ಸಾಕಷ್ಟು ಹೊಸ ದೃಶ್ಯಗಳು ಹಾಗೂ ಹಾಡುಗಳನ್ನು ಮರುಜೋಡಣೆ ಮಾಡಿದ್ದೇವೆ. ಚಿತ್ರಮಂದಿರದಲ್ಲಿ ವೀಕ್ಷಕರಿಗೆ ಇದೊಂದು ಸಸ್ಪೆನ್ಸ್ ತುಂಬಿದ ವಿಭಿನ್ನ ಅನುಭವ ನೀಡಲಿದ್ದು, ಚಿತ್ರದ ಮುಖ್ಯ ಕಥೆಯ ರಹಸ್ಯವನ್ನು ಸದ್ಯಕ್ಕೆ ಬಿಟ್ಟುಕೊಡುವುದಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !