September 4, 2026
Friday, September 4, 2026
spot_img

ಗೋವಾದ ಬಿಜೆಪಿ ಶಾಸಕಿ ಜೆನ್ನಿಫರ್ ಮಾನ್ಸೆರಾಟ್ಟೆ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದ ತಲೈಗಾವೊ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವೆ ಜೆನ್ನಿಫರ್ ಮಾನ್ಸೆರಾಟ್ಟೆ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. 56 ವರ್ಷದ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಅವರ ಅಗಲಿಕೆಗೆ ರಾಜಕೀಯ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.

ಮೂರು ಬಾರಿ ಶಾಸಕಿ

2012ರಿಂದ ತಲೈಗಾವೊ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆನ್ನಿಫರ್ ಮಾನ್ಸೆರಾಟ್ಟೆ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ:

ಸಚಿವೆಯಾಗಿಯೂ ಸೇವೆ

2019ರಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದ ಅವರು, ಅದೇ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಾಯಕರಲ್ಲಿ ಒಬ್ಬರಾಗಿದ್ದರು.

ಸಿಎಂ ಸಂತಾಪ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಜೆನ್ನಿಫರ್ ಅವರ ಸೇವೆಯನ್ನು ಸ್ಮರಿಸಿ, ಅವರ ನಿಧನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಜೆನ್ನಿಫರ್ ಅವರ ಪತಿ ಅಟನಾಸಿಯೊ ಮಾನ್ಸೆರಾಟ್ಟೆ ಸಚಿವರಾಗಿದ್ದು, ಪುತ್ರ ರೋಹಿತ್ ಮಾನ್ಸೆರಾಟ್ಟೆ ಪಣಜಿ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !