October 9, 2026
Friday, October 9, 2026
spot_img

ಸಲ್ಮಾನ್‌ ಖಾನ್‌ಗೆ ಅನಾರೋಗ್ಯ ಕಾಡ್ತಾ ಇದೆ ಎಂದ ಫ್ಯಾನ್ಸ್‌ಗೆ ಫೋಟೊ ಮೂಲಕ ಉತ್ತರ ಕೊಟ್ಟ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಸಲ್ಮಾನ್‌ ಖಾನ್‌ ಎರಾ ಮುಗಿದುಹೋಯ್ತು. ಇನ್ನು ವಯಸ್ಸಾಯ್ತು, ಜೊತೆಗೆ ಅನಾರೋಗ್ಯ ಕಾಡ್ತಾ ಇರುವಂತೆ ಕಾಣಿಸ್ತಿದ್ದಾರೆ ಎನ್ನುವ ಕಮೆಂಟ್‌ಗಳಿಗೆ ಸಲ್ಲು ಉತ್ತರ ನೀಡಿದ್ದಾರೆ.

ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿಯ ನೂತನ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಷನ್ ಸಪೋರ್ಟ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮೊನ್ನೆಮೊನ್ನೆಯಷ್ಟೇ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಅದೇ ವೇಳೆ ಸೆರೆಯಾದ ವಿಡಿಯೋದಲ್ಲಿ ಸಲ್ಮಾನ್ ಖಾನ್ ತೀರಾ ದಣಿದಂತೆ, ತುಂಬಾ ವಯಸ್ಸಾದಂತೆ, ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣಿಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಎಸ್‌ಆರ್‌ಎ ಕಚೇರಿ ಉದ್ಘಾಟನೆಗೆ ಸರಳ ಉಡುಗೆಯಲ್ಲಿ ಆಗಮಿಸಿದ್ದ ಸಲ್ಮಾನ್ ಖಾನ್ ಯಾವುದೇ ವಿಶೇಷ ಪ್ರಚಾರವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

https://www.instagram.com/p/Da_ItRWE9gg/?utm_source=ig_embed&ig_rid=A8YukAcOz0KonltD23ZxQQw

ಈ ಈವೆಂಟ್‌ನ ಫೋಟೊ ಅಪ್‌ಲೋಡ್‌ ಮಾಡಿರುವ ಸಲ್ಲು ವ್ಯಂಗ್ಯವಾಗಿ ” ನಿಮ್ಮೆಲ್ಲರ ಆರೋಗ್ಯ ಹೇಗಿದೆ?” ಎಂದು ಕ್ಯಾಪ್ಷನ್‌ ಹಾಕಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗಿದೆ.

Must Read