July 21, 2026
Tuesday, July 21, 2026
spot_img

ಕೇರಳದಲ್ಲಿ ಫಿಫಾ ವಿಶ್ವಕಪ್‌ ಕ್ರೇಝ್‌ : ರಾತ್ರಿಯಿಡೀ ಮ್ಯಾಚ್‌ ನೋಡಿದ ವಿದ್ಯಾರ್ಥಿಗಳಿಗೆ ಇಂದು ಸ್ಕೂಲ್‌ ರಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿಯೂ ಫುಟ್‌ಬಾಲ್‌ ಕ್ರೇಝ್‌ ಇದೆ. ಕ್ರಿಕೆಟ್‌ ರೀತಿ ಅಲ್ಲವಾದ್ರೂ ಫುಟ್‌ಬಾಲ್‌ಗೆ ಅದರದ್ದೇ ಆದ ಸಪರೇಟ್‌ ಫ್ಯಾನ್‌ ಬೇಸ್‌ ಇದೆ. ಅದರಲ್ಲಿಯೂ ಕೇರಳದಲ್ಲಿ ಫುಟ್‌ಬಾಲ್‌ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ತಡರಾತ್ರಿಯಿಡೀ ಫಿಫಾ ವಿಶ್ವಕಪ್‌ ಫೈನಲ್​ ಮ್ಯಾಚ್‌ ನೋಡಿದ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ.

ಹೌದು, ನಿನ್ನೆ ತಡರಾತ್ರಿ ಮೆಟ್‌ ಲೈಫ್ ಸ್ಟೇಡಿಯಂನಲ್ಲಿ ನಡೆದ 2026ರ ಫಿಫಾ ವಿಶ್ವಕಪ್‌ ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 1-0 ಗೋಲುಗಳ ಮೂಲಕ ಸ್ಪೇನ್ ಭರ್ಜರಿ ಜಯ ಸಾಧಿಸಿದೆ. ರಾತ್ರಿಯಿಡೀ ಮ್ಯಾಚ್‌ ನೋಡಿದ ವಿದ್ಯಾರ್ಥಿಗಳಿಗೆ ಇಂದು ರೆಸ್ಟ್‌ ಮಾಡಲು ಕೇರಳ ಸರ್ಕಾರ ರಜೆ ಘೋಷಣೆ ಮಾಡಿದೆ.

ಕೇರಳದಲ್ಲಿ ಅದರಲ್ಲೂ ಮಲಬಾರ್‌ ಪ್ರದೇಶದಲ್ಲಿ ಫುಟ್ಬಾಲ್‌ ಕ್ರೇಜ್ ತುಸು ಹೆಚ್ಚಾಗಿದೆ. ಅಲ್ಲಲ್ಲಿ ಪ್ರತ್ಯೇಕ ಪರದೆಯನ್ನ ಹಾಕಿ ಪಂದ್ಯಾವಳಿ ವೀಕ್ಷಣೆ ಮಾಡಲಾಗಿದೆ. ಕ್ರೀಡೆಯನ್ನು ಹೆಚ್ಚು ಉತ್ತೇಜಿಸುವುದಕ್ಕಾಗಿ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಕೊಂಚ ರೆಸ್ಟ್‌ ಮಾಡಲು ಸಾಧ್ಯವಾಗಿದೆ.

ಭಾನುವಾರ ಮಧ್ಯರಾತ್ರಿಯ ಫುಟ್ಬಾಲ್​ ಪಂದ್ಯ ನಡೆದಿದ್ದು, ಆಟ ಸೋಮವಾರ ಬೆಳಗ್ಗೆ ಅಷ್ಟೇ ಕೊನೆಗೊಂಡಿದೆ. ರಾತ್ರಿಯಿಡೀ ವಿದ್ಯಾರ್ಥಿಗಳು ಫುಟ್ಬಾಲ್​ ಪಂದ್ಯ ನೋಡಿ ಮಲಗಿ, ಬೆಳಗ್ಗೆ ಎಂದು ಶಾಲೆ-ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ. ಅಲ್ಲದೆ ತೀವ್ರ ಆಯಾಸಗೊಳ್ತಾರೆ ಎಂದು ವಿದ್ಯಾರ್ಥಿಗಳ ಆರೋಗ್ಯ ಪರಿಗಣಿಸಿ ರಜೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !