ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ಮತ್ತು ಜಾತಿ ಪ್ರಮಾಣಪತ್ರಗಳನ್ನು ಮನೆಮನೆಗೆ ತಲುಪಿಸುವ ಹೊಸ ಸೇವೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. 11 ನಿಗದಿತ ಮಾನದಂಡಗಳ ಆಧಾರದ ಮೇಲೆ ಪಿಆರ್‌ಸಿ ನೀಡಲಾಗುತ್ತಿದ್ದು, ಜನರು ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
11 ಮಾನದಂಡಗಳ ಆಧಾರ
ಪಿಆರ್‌ಸಿ ಪಡೆಯಲು ಕರ್ನಾಟಕದಲ್ಲಿ ಜನನ, ಕನಿಷ್ಠ 10 ವರ್ಷಗಳ ವಾಸ, ಶಿಕ್ಷಣ, ವಿವಾಹ, ಪೋಷಕರ ನಿವಾಸ, ಆಸ್ತಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿದಂತೆ ಒಟ್ಟು 11 ಮಾನದಂಡಗಳನ್ನು ಸರ್ಕಾರ ನಿಗದಿಪಡಿಸಿದೆ.
ಇದನ್ನೂ ಓದಿ:
4.85 ಕೋಟಿ ಪ್ರಮಾಣಪತ್ರ ವಿತರಣೆ
ರಾಜ್ಯದಲ್ಲಿ ಸುಮಾರು 4.85 ಕೋಟಿ ಜಾತಿ ಹಾಗೂ ನಿವಾಸ ಪ್ರಮಾಣಪತ್ರಗಳನ್ನು ಹಂತ ಹಂತವಾಗಿ ವಿತರಿಸಲಾಗುತ್ತದೆ. ಅಟಲ್ ಜನಸ್ನೇಹಿ ಕೇಂದ್ರಗಳು, ನಾಡಕಚೇರಿ, ಗ್ರಾಮ ಒನ್, ವೆಬ್‌ಸೈಟ್ ಹಾಗೂ ವಾಟ್ಸಾಪ್ ಮೂಲಕವೂ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ದೂರುಗಳಿಗೆ ಮೇಲ್ಮನವಿ ಅವಕಾಶ
ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮೇಲ್ಮನವಿ ಸಲ್ಲಿಸಿ ಮರುಪರಿಶೀಲನೆ ಪಡೆಯುವ ಅವಕಾಶವೂ ಲಭ್ಯವಿದೆ.



