ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಕ್ರೋಚ್ ಜನತಾ ಪಾರ್ಟಿ ದೇಶದ್ರೋಹಿ ಸಂಘಟನೆ, ಅದರ ಮುಖ್ಯಸ್ಥ ಅಭಿಜಿತ್ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅದರ ಜೊತೆಗೆ ಈಗ ರಾಹುಲ್ ಗಾಂಧಿ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಮನೆ ಬಾಗಿಲಿಗೆ ಆತ್ಮಹತ್ಯೆ ತಂದ ಸರ್ಕಾರ ಇದು. ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆ ಅಂತಾರೆ. ʻಸಿಜೆಪಿʼ ಅದೊಂದು ದೇಶ ದ್ರೋಹ ಸಂಘಟನೆ ಅಂತವರ ಜೊತೆ ರಾಗಾ ಗುರುತಿಸಿಕೊಳ್ತಿದ್ದಾರೆ. ಈ ಕೆಲಸ ಬಿಟ್ಟು ದೇಶದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಆಗೋದಿಲ್ವಾ?
ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ, ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು? ಅಧಿಕಾರಿಗಳನ್ನ ನಂಬೋಕೆ ಆಗುತ್ತಾ? ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ಯಾವ ಮನೆಹಾಳ ಈ ಐಡಿಯಾ ಕೊಟ್ಟ ಗೊತ್ತಿಲ್ಲ. ರಾಜ್ಯ ಸರ್ಕಾರವೇ ಇನ್ನು ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ? ರೋಮ್ ಹೊತ್ತಿ ಉರಿದರೆ ಯಾರೋ ಪಿಟೀಲು ಬಾರಿಸುತ್ತಿದ್ದನಂತೆ, ಅದೇ ರೀತಿ ಸಿಎಂ ದೆಹಲಿಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಈಗ ದೆಹಲಿ ಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.



