October 10, 2026
Saturday, October 10, 2026
spot_img

ಸೆನ್ಸಾರ್ ಕತ್ತರಿ ಮಧ್ಯೆಯೂ ಥಿಯೇಟರ್‌ಗೆ ‘ಜನ ನಾಯಗನ್’: ವಿಜಯ್ ಚಿತ್ರಕ್ಕೆ ‘A’ ಸರ್ಟಿಫಿಕೇಟ್ ಸಿಕ್ಕಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಪ್ರಿಯ ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಕೊನೆಗೂ ಜುಲೈ 23ರಂದು ವಿಶ್ವದಾದ್ಯಂತ ತೆರೆಕಂಡಿದೆ. ಜನವರಿಯಲ್ಲೇ ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಲ್ಲಿದ್ದ ತೊಡಕುಗಳಿಂದಾಗಿ ಏಳು ತಿಂಗಳು ತಡವಾಗಿ ಬಿಡುಗಡೆಯಾಗಿದೆ.

ಕುಟುಂಬ ಪ್ರೇಕ್ಷಕರಿಗೆ ಅಚ್ಚರಿ ತಂದ ‘A’ ಸರ್ಟಿಫಿಕೇಟ್

ಸಾಮಾನ್ಯವಾಗಿ ಕುಟುಂಬ ಸಮೇತ ನೋಡುವ ಚಿತ್ರಗಳನ್ನು ನೀಡುವ ವಿಜಯ್ ಅವರ ಈ ಸಿನಿಮಾಗೆ ಮಂಡಳಿಯು ‘A’ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿರುವುದು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಚಿತ್ರಕ್ಕೆ ಒಪ್ಪಿಗೆ ಸಿಗುವ ಮುನ್ನ ಬರೋಬ್ಬರಿ 12 ಭಾಗಗಳಲ್ಲಿ ದೃಶ್ಯ ಹಾಗೂ ಸಂಭಾಷಣೆಗಳನ್ನು ಕತ್ತರಿಸಲಾಗಿದೆ.

ಪ್ರಮುಖ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಮ್ಯೂಟ್

ಚಿತ್ರದ ಹಲವು ಭಾಗಗಳಲ್ಲಿ ಪ್ರಮುಖ ಶಬ್ದಗಳನ್ನು ಮ್ಯೂಟ್ ಮಾಡಲಾಗಿದೆ:

  • ರಾಜಕೀಯ ಮತ್ತು ಸಂವಿಧಾನ: ಅಮೆರಿಕ, ಸದ್ದಾಂ ಹುಸೇನ್, ಸಂವಿಧಾನ ಹಾಗೂ ‘ಟಿವಿಕೆ’ ಉಲ್ಲೇಖವಿರುವ ಮಾತುಗಳನ್ನು ಸೆನ್ಸಾರ್ ಮ್ಯೂಟ್ ಮಾಡಿದೆ.
  • ಪ್ರಕಾಶ್ ರಾಜ್ ಸಂಭಾಷಣೆ: ನಟ ಪ್ರಕಾಶ್ ರಾಜ್ ಅವರು ‘ದರ್ಶನ’ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವ ಕೆಲ ಪ್ರಮುಖ ಸಾಲುಗಳಿಗೆ ಕತ್ತರಿ ಬಿದ್ದಿದೆ.

Must Read