October 10, 2026
Saturday, October 10, 2026
spot_img

ಜ್ಯೋತಿಷ್ಯದ ಪ್ರಕಾರ ಯಾವ ರಾಶಿಗೆ ಯಾವ ಸ್ಪಿರಿಟ್‌ ಅನಿಮಲ್‌? ಇಲ್ಲಿದೆ ಸಂಪೂರ್ಣ ಮಾಹಿತಿ

ಜ್ಯೋತಿಷ್ಯ ಮತ್ತು ಆಧುನಿಕ ರಾಶಿಚಕ್ರದ ನಂಬಿಕೆಗಳ ಪ್ರಕಾರ ಪ್ರತೀ ರಾಶಿಗೂ ಒಂದು ಸ್ಪಿರಿಟ್‌ ಅನಿಮಲ್‌ ಇದೆ. ಇದನ್ನು ಅವರ ಗುಣಗಳಿಗೆ ಅನುಸಾರವಾಗಿ ಜೋಡಿಸಲಾಗುತ್ತದೆ. ಇವು ರಾಶಿಯವರ ಗುಣ ಹಾಗೂ ವ್ಯಕ್ತಿತ್ವವನ್ನು ಸೂಚಿಸುತ್ತವೆ ಎನ್ನುವ ನಂಬಿಕೆ ಇದೆ. ಯಾವ ರಾಶಿಗೆ ಯಾವ ಪ್ರಾಣಿ? ಇಲ್ಲಿದೆ ಸಂಪೂರ್ಣ ಮಾಹಿತಿ..

ಮೇಷ – ಟಗರು: ಈ ರಾಶಿಯವರು ಧೈರ್ಯ, ನಾಯಕತ್ವ ಹಾಗೂ ಸಾಹಸಿಗಳಾಗಿರುತ್ತಾರೆ.

ವೃಷಭ – ಗೂಳಿ : ಈ ರಾಶಿಯವರು ಸ್ಥಿರತೆ, ತಾಳ್ಮೆ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ.

ಮಿಥುನ-ನರಿ : ಈ ರಾಶಿಯವರು ಕುತೂಹಲ ಬುದ್ಧಿಜೀವಿಗಳು, ಚುರುಕು ಮನಸ್ಥಿತಿ ಹಾಗೂ ಹೊಂದಾಣಿಕೆಯ ಜೀವಿಗಳಾಗಿರುತ್ತಾರೆ.

ಕರ್ಕಾಟಕ – ಏಡಿ : ಈ ರಾಶಿಯವರು ಕುಟುಂಬ ಪ್ರೀತಿ ಕಡೆಗೆ ತುಂಬಾ ಆಸಕ್ತಿ ಹೊಂದಿರುತ್ತಾರೆ. ಭಾವನಾತ್ಮಕತೆ ಹಾಗೂ ರಕ್ಷಣೆ ಇವರಿಗೆ ಅತ್ಯಾವಶ್ಯಕ.

ಸಿಂಹ – ಸಿಂಹ : ಈ ರಾಶಿಯ ಹೆಸರಿನಂತೆಯೇ ಇವರ ಸ್ಪಿರಿಟ್‌ ಅನಿಮಲ್‌ ಸಿಂಹ ಆಗಿದೆ. ಆತ್ಮವಿಶ್ವಾಸ, ಶಕ್ತಿ ಹಾಗೂ ನಾಯಕತ್ವ ಇವರಿಗೆ ಸಹಜಗುಣ.

ಕನ್ಯಾ- ಗೂಬೆ : ಈ ರಾಶಿಯವರ ವಿವೇಚನೆಗೆ ಹೆಸರುವಾಸಿ. ಎಲ್ಲ ವಿಷಯಗಳನ್ನು ಗಮನಿಸುತ್ತಾರೆ. ಜ್ಞಾನಿಗಳು.

ತುಲಾ: ಹಂಸ: ಈ ರಾಶಿಯವರು ಸೌಂದರ್ಯಕ್ಕೆ ಹೆಸರುವಾಸಿ. ಸದಾ ಸಮತೋಲನದ ಜೀವನ ನಡೆಸಲು ಬಯಸುತ್ತಾರೆ.

ವೃಶ್ಚಿಕ – ಚೇಳು : ಈ ರಾಶಿಯವರು ರಹಸ್ಯಮಯತೆ, ತೀವ್ರ ಭಾವನೆ ಹಾಗೂ ದೃಢತೆಯ ಸಂಕೇತವಾಗಿದೆ.

ಧನು – ಕುದುರೆ: ಸ್ವಾತಂತ್ರ್ಯ, ಸಾಹಸ ಹಾಗೂ ಪ್ರಯಾಣದ ಸಂಕೇತವಾಗಿದೆ.

ಮಕರ – ಮೇಕೆ: ಈ ರಾಶಿಯವರಿಗೆ ಪರಿಶ್ರಮ, ಶಿಸ್ತು ಬಹಳ ಮುಖ್ಯ. ಗುರಿ ಹಾಗೂ ಸಾಧನೆಯ ಸಂಕೇತವಾಗಿದೆ.

ಕುಂಭ – ಡಾಲ್ಫೀನ್‌ : ಇವರಿಗೆ ಸ್ವತಂತ್ರ್ಯ ಚಿಂತನೆ ಇದೆ. ಬುದ್ಧಿವಂತಿಕೆಗೆ ಹೆಸರುವಾಸಿ. ಸೃಜನಶೀಲತೆಯ ಸಂಕೇತವಾಗಿರುತ್ತಾರೆ.

ಮೀನ – ತೋಳ: ಇವರು ಅತ್ಯಂತ ಸೂಕ್ಷ್ಮ ಜೀವಿಗಳು, ಸದಾ ಭಾವನೆಗಳಿಗೆ ಬೆಲೆ ನೀಡುತ್ತಾರೆ. ಸಂಬಂಧಗಳನ್ನು ನಿಭಾಯಿಸುತ್ತಾರೆ.

Must Read