October 10, 2026
Saturday, October 10, 2026
spot_img

ಸೈಲೆಂಟ್‌ ಆಗಿಯೇ 39 ಕೋಟಿ ರೂಪಾಯಿ ಗಳಿಕೆ ಮಾಡಿದ ʼಪ್ರೇಮದ ಊರಲಿʼ ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಈ ಬಾರಿ ಸ್ಟಾರ್ಸ್‌, ಪ್ರೊಡಕ್ಷನ್‌, ಬಿಗ್‌ ಬಜೆಟ್‌ ನೋಡಿ ಜನ ಸಿನಿಮಾಗಳನ್ನು ಇಷ್ಟಪಡುತ್ತಿಲ್ಲ. ಬದಲಾಗಿ, ಅಂದದ ಕಥೆಯಿದ್ದರೆ, ಕಥೆಯನ್ನು ಚೆನ್ನಾಗಿ ಹೇಳುವ ನಟರಿದ್ದರೆ ಸಾಕು ಸಿನಿಮಾ ತಂತಾನಾಗಿಯೇ ಹಿಟ್‌ ಆಗುತ್ತದೆ.

ಇದಕ್ಕೆ ಸಾಕ್ಷಿ ಪ್ರೇಮದ ಊರಲಿ ಸಿನಿಮಾ. ಹೌದು, ಸಿನಿಮಾ ಬಿಡುಗಡೆಯಾದಾಗ ನಿಧಾನವಾಗಿ ಗಳಿಕೆ ಆರಂಭಿಸಿತ್ತು. ಆನಂತರ ವೀಕ್ಷಕರ ಮೆಚ್ಚುಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮಾತುಗಳನ್ನು ಕೇಳಿ ಸಿನಿಮಾ ನೋಡುತ್ತಿದ್ದಾರೆ.

ಜನರ ಪಬ್ಲಿಸಿಟಿಯಿಂದಾಗಿ ಚಿತ್ರದ ಕಲೆಕ್ಷನ್‌ನಲ್ಲಿ ಭಾರೀ ಏರಿಕೆಯಾಗಿದೆ. ಮೊದಲ ವಾರದಲ್ಲಿಯೂ ಉತ್ತಮ ಗಳಿಕೆ ಕಂಡ ಈ ಸಿನಿಮಾ, ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ತನ್ನ ವೇಗವನ್ನು ದುಪ್ಪಟ್ಟುಗೊಳಿಸಿದೆ. ಪ್ರಸ್ತುತ ಈ ಚಿತ್ರವು ಒಟ್ಟು 39.05 ಕೋಟಿ ರೂಪಾಯಿಗಳಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಸಿನಿಮಾವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ಅಂದರೆ ಎರಡು ವಾರಗಳ ಒಳಗೆ ಬರೋಬ್ಬರಿ 39.05 ಕೋಟಿ ರೂ ಗಳಿಕೆ ಹಾಗೂ 33.47 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿದೆ. ಸದ್ಯ ಎಲ್ಲ ಕಡೆ ಸಿನಿಮಾ ಹೌಸ್‌ಫುಲ್‌ ಆಗಿದ್ದು, ಒಂದು ದಿನದ ಮುನ್ನವೇ ಜನ ಬುಕ್ಕಿಂಗ್‌ ಮಾಡಬೇಕಿದೆ.

Must Read