September 27, 2026
Sunday, September 27, 2026
spot_img

Dahi Puri | ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಕರ ದಹಿ ಪುರಿ

ಮನೆಯಲ್ಲೇ ಹೋಟೆಲ್‌ ಶೈಲಿಯ ದಹಿ ಪುರಿ ತಿನ್ಬೇಕು ಅಂದ್ರೆ ನೀವು ಈ ರೆಸಿಪಿ ಟ್ರೈ ಮಾಡಿ. ಗರಿಗರಿಯಾದ ಪುರಿ, ಸಿಹಿ-ಖಾರದ ಚಟ್ನಿ, ತಾಜಾ ಮೊಸರು ಮತ್ತು ಸೇವ್‌ ಜೊತೆ ತಯಾರಾಗುವ ಈ ತಿಂಡಿ ಮಕ್ಕಳು ಮತ್ತು ದೊಡ್ಡವರ ಮೆಚ್ಚಿನ ಸ್ನ್ಯಾಕ್ ಆಗಿಬಿಡುತ್ತೆ.

ಬೇಕಾಗುವ ಪದಾರ್ಥಗಳು

ಗರಿಗರಿಯಾದ ಪುರಿಗಳು – 10 ರಿಂದ 12
ಬೇಯಿಸಿ ಹಿಸುಕಿದ ಆಲೂಗಡ್ಡೆ – 1 ಕಪ್
ತಾಜಾ ಗಟ್ಟಿಯಾದ ಮೊಸರು – 1 ಕಪ್
ಹಸಿ ಮೆಣಸು-ಕೊತ್ತಂಬರಿ ಚಟ್ನಿ – 3 ರಿಂದ 4 ಟೇಬಲ್ ಸ್ಪೂನ್
ಖರ್ಜೂರ-ಹುಣಸೆಹಣ್ಣಿನ ಸಿಹಿ ಚಟ್ನಿ – 3 ರಿಂದ 4 ಟೇಬಲ್ ಸ್ಪೂನ್
ಸಣ್ಣ ಸೇವ್ – ½ ಕಪ್
ಚಾಟ್ ಮಸಾಲಾ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್

ಮಾಡುವ ವಿಧಾನ

ಮೊದಲು ಪ್ರತಿಯೊಂದು ಪುರಿಯ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಮಾಡಿ.
ಅದರೊಳಗೆ ಬೇಯಿಸಿ ಹಿಸುಕಿದ ಆಲೂಗಡ್ಡೆಯನ್ನು ತುಂಬಿ.
ನಂತರ ಹಸಿ ಮೆಣಸು-ಕೊತ್ತಂಬರಿ ಚಟ್ನಿ ಮತ್ತು ಖರ್ಜೂರ-ಹುಣಸೆಹಣ್ಣಿನ ಸಿಹಿ ಚಟ್ನಿಯನ್ನು ಸೇರಿಸಿ.
ಸ್ವಲ್ಪ ಉಪ್ಪು ಬೆರೆಸಿದ ತಣ್ಣನೆಯ ಗಟ್ಟಿಯಾದ ಮೊಸರನ್ನು ಎಲ್ಲ ಪುರಿಗಳ ಮೇಲೂ ಸಮವಾಗಿ ಸುರಿಯಿರಿ.
ಬಳಿಕ ಚಾಟ್ ಮಸಾಲಾ ಉದುರಿಸಿ.
ಕೊನೆಯಲ್ಲಿ ಸೇವ್ ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ತಕ್ಷಣವೇ ಸವಿಯಿರಿ.

Must Read