ಮನೆಯಲ್ಲೇ ಹೋಟೆಲ್ ಶೈಲಿಯ ದಹಿ ಪುರಿ ತಿನ್ಬೇಕು ಅಂದ್ರೆ ನೀವು ಈ ರೆಸಿಪಿ ಟ್ರೈ ಮಾಡಿ. ಗರಿಗರಿಯಾದ ಪುರಿ, ಸಿಹಿ-ಖಾರದ ಚಟ್ನಿ, ತಾಜಾ ಮೊಸರು ಮತ್ತು ಸೇವ್ ಜೊತೆ ತಯಾರಾಗುವ ಈ ತಿಂಡಿ ಮಕ್ಕಳು ಮತ್ತು ದೊಡ್ಡವರ ಮೆಚ್ಚಿನ ಸ್ನ್ಯಾಕ್ ಆಗಿಬಿಡುತ್ತೆ.
ಬೇಕಾಗುವ ಪದಾರ್ಥಗಳು
ಗರಿಗರಿಯಾದ ಪುರಿಗಳು – 10 ರಿಂದ 12
ಬೇಯಿಸಿ ಹಿಸುಕಿದ ಆಲೂಗಡ್ಡೆ – 1 ಕಪ್
ತಾಜಾ ಗಟ್ಟಿಯಾದ ಮೊಸರು – 1 ಕಪ್
ಹಸಿ ಮೆಣಸು-ಕೊತ್ತಂಬರಿ ಚಟ್ನಿ – 3 ರಿಂದ 4 ಟೇಬಲ್ ಸ್ಪೂನ್
ಖರ್ಜೂರ-ಹುಣಸೆಹಣ್ಣಿನ ಸಿಹಿ ಚಟ್ನಿ – 3 ರಿಂದ 4 ಟೇಬಲ್ ಸ್ಪೂನ್
ಸಣ್ಣ ಸೇವ್ – ½ ಕಪ್
ಚಾಟ್ ಮಸಾಲಾ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಮಾಡುವ ವಿಧಾನ
ಮೊದಲು ಪ್ರತಿಯೊಂದು ಪುರಿಯ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಮಾಡಿ.
ಅದರೊಳಗೆ ಬೇಯಿಸಿ ಹಿಸುಕಿದ ಆಲೂಗಡ್ಡೆಯನ್ನು ತುಂಬಿ.
ನಂತರ ಹಸಿ ಮೆಣಸು-ಕೊತ್ತಂಬರಿ ಚಟ್ನಿ ಮತ್ತು ಖರ್ಜೂರ-ಹುಣಸೆಹಣ್ಣಿನ ಸಿಹಿ ಚಟ್ನಿಯನ್ನು ಸೇರಿಸಿ.
ಸ್ವಲ್ಪ ಉಪ್ಪು ಬೆರೆಸಿದ ತಣ್ಣನೆಯ ಗಟ್ಟಿಯಾದ ಮೊಸರನ್ನು ಎಲ್ಲ ಪುರಿಗಳ ಮೇಲೂ ಸಮವಾಗಿ ಸುರಿಯಿರಿ.
ಬಳಿಕ ಚಾಟ್ ಮಸಾಲಾ ಉದುರಿಸಿ.
ಕೊನೆಯಲ್ಲಿ ಸೇವ್ ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ತಕ್ಷಣವೇ ಸವಿಯಿರಿ.



