September 20, 2026
Sunday, September 20, 2026
spot_img

ಚೆನ್ನೈ ರಸ್ತೆಯಲ್ಲಿ ‘ರಾಜ ಒಡೆಯರ್’ ಶೈಲಿಯಲ್ಲಿ ಫುಡ್ ಡೆಲಿವರಿ! ನೆಟ್ಟಿಗರು ಫುಲ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಆಹಾರ ವಿತರಣೆ ಇಂದು ದೈನಂದಿನ ಜೀವನದ ಭಾಗವಾಗಿದೆ. ಸಾಮಾನ್ಯವಾಗಿ ಡೆಲಿವರಿ ಸಿಬ್ಬಂದಿ ಬೈಕ್ ಅಥವಾ ಸ್ಕೂಟರ್‌ಗಳಲ್ಲಿ ಬಂದು ಗ್ರಾಹಕರಿಗೆ ಆಹಾರ ತಲುಪಿಸುವುದನ್ನು ನಾವು ಕಾಣುತ್ತೇವೆ. ಆದರೆ ತಮಿಳುನಾಡಿನ ಚೆನ್ನೈನಲ್ಲಿ ವಿಭಿನ್ನ ಘಟನೆಯೊಂದು ನಡೆದಿದ್ದು, ಡೆಲಿವರಿ ಯುವಕನೊಬ್ಬ ಕುದುರೆಯನ್ನೇರಿ ಆಹಾರ ಪೂರೈಸಲು ತೆರಳಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವೈರಲ್ ವೀಡಿಯೊದ ವಿವರ

ಚೆನ್ನೈನ ಇಸಿಆರ್ ಮಾರ್ಗದ ಪಲವಕ್ಕಂ ಭಾಗದಲ್ಲಿ ಈ ರೋಮಾಂಚಕ ದೃಶ್ಯ ಸೆರೆಯಾಗಿದೆ. ‘iamvenkat_vvr’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಶಾರ್ಟ್ ವೀಡಿಯೊದಲ್ಲಿ, ಯುವಕ ರಾಜ ಗಾಂಭೀರ್ಯದಿಂದ ಕುದುರೆ ಓಡಿಸುತ್ತಾ ಕೆಲಸ ನಿರ್ವಹಿಸುತ್ತಿರುವುದು ಕಾಣಿಸುತ್ತದೆ. ಟ್ರಾಫಿಕ್ ದಟ್ಟಣೆ ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚಕ್ಕೆ ಈತ ಕಂಡುಕೊಂಡ ಉಪಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು

ಈ ವೀಡಿಯೊ ಈಗಾಗಲೇ 69 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಲೈಕ್ಸ್ ಮತ್ತು ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. “ಈ ಪ್ಲಾನ್‌ಗೆ ಪೆಟ್ರೋಲ್ ಚಾರ್ಜ್ ಬೇಕಿಲ್ಲ, ಹುಲ್ಲು ನೀಡಿದರೆ ಸಾಕು”, “ಇದು ಡೆಲಿವರಿ ಆಪ್‌ನ ಹೊಸ ಅಪ್‌ಡೇಟ್” ಎಂದು ನೆಟ್ಟಿಗರು ಹಾಸ್ಯಸ್ಪದವಾಗಿ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಡೆಲಿವರಿ ಬಾಯ್ ಐಡಿಯಾ ಈಗ ಇಂಟರ್ನೆಟ್ ಜಗತ್ತಿನಲ್ಲಿ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !