November 6, 2026
Friday, November 6, 2026
spot_img

VB GRAMG ಯೋಜನೆಗೆ 2,900 ಕೋಟಿ ರೂ. ಅನುದಾನ: ಪ್ರತಿ ತಿಂಗಳು 5 ಲಕ್ಷ ಮಂದಿಗೆ ಉದ್ಯೋಗದ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ವೇಗ ನೀಡುವ ಉದ್ದೇಶದಿಂದ ಜಾರಿಯಲ್ಲಿರುವ VB GRAMG ಯೋಜನೆಗೆ ಮೊದಲ ತ್ರೈಮಾಸಿಕದಲ್ಲೇ 2,900 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ತಿಂಗಳು 5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

2,900 ಕೋಟಿ ಅನುದಾನ ಬಿಡುಗಡೆ

ಕೇಂದ್ರ ಸರ್ಕಾರ 1,700 ಕೋಟಿ ಹಾಗೂ ರಾಜ್ಯ ಸರ್ಕಾರ 1,200 ಕೋಟಿ ಸೇರಿ ಮೊದಲ ತ್ರೈಮಾಸಿಕಕ್ಕೆ ಒಟ್ಟು 2,900 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನದಿಂದ ಸುಮಾರು 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಗ್ರಾಮೀಣ ಕಾಮಗಾರಿಗಳಿಗೆ ಆದ್ಯತೆ

ಕೃಷಿ ಹೊಂಡ, ಹನಿ ನೀರಾವರಿ, ಕೆರೆ-ಕಾಲುವೆ ಅಭಿವೃದ್ಧಿ, ಚೆಕ್ ಡ್ಯಾಂ ಸೇರಿದಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಉದ್ಯೋಗ ಕೇಳಿದವರಿಗೆ ತಕ್ಷಣ ಕೆಲಸ

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಗ್ರಾಮೀಣರಿಗೂ ಅವರ ಸ್ಥಳದಲ್ಲೇ ಕೆಲಸ ಒದಗಿಸುವಂತೆ ಜಿಲ್ಲಾ ಸಿಇಒಗಳು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Must Read