ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಹಾಗೂ ಕೊಡಿಯಲ್ ಬೈಲ್ ನಲ್ಲಿ ಜು.29ರಂದು ಗುರುಪೂರ್ಣಿಮೆಯನ್ನು ಆಯೋಜಿಸಲಾಗಿದೆ.
ಮಹೋತ್ಸವದ ಅಂಗವಾಗಿ ಶ್ರೀ ವ್ಯಾಸಪೂಜೆ, ಪರಮ ಪೂಜ್ಯ ಭಕ್ತರಾಜ ಮಹಾರಾಜರ ಭಾವಚಿತ್ರ ಪೂಜೆ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸನ್ಮಾನ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯ ವ್ಯಕ್ತಿಗಳಿಂದ ವಿಶೇಷ ಮಾರ್ಗದರ್ಶನ, ಸ್ವಸಂರಕ್ಷಣೆಯ ಸುಲಭ ಪದ್ಧತಿಗಳ ಪ್ರಾತ್ಯಕ್ಷಿಕೆ, ಸಮಿತಿಯ ಪ್ರೇರಣಾಸ್ರೋತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯದ ಕುರಿತ ಕಿರುಚಿತ್ರ ಪ್ರದರ್ಶನ, ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ ಧರ್ಮ ಜಾಗೃತಿ ಮೂಡಿಸುವ ಪೋಸ್ಟರ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ:
ಸಮಸ್ತ ಹಿಂದೂ ಬಂಧುಗಳು ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಜು.೨೯ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ 64 ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧೆಡೆ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ.



