August 1, 2026
Saturday, August 1, 2026
spot_img

‘ಸರ್ಕಾರದಿಂದ ಹಂಚಿಕೆಯಾಗಿರುವ ಸೈಟ್‌ನಲ್ಲಿ ಮನೆ ಕಟ್ಟದಿದ್ರೆ ವಾಪಸ್‌ ಪಡೆಯುತ್ತೇವೆ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರದಿಂದ ಹಂಚಿಕೆಯಾಗಿರುವ ಸೈಟ್‌ಗಳಲ್ಲಿ ಮನೆ ಕಟ್ಟದೇ ಖಾಲಿ ಬಿಟ್ಟರೆ ಅಂತಹವರಿಂದ ನಿವೇಶನಗಳನ್ನ ವಾಪಸ್‌ ಪಡೆಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ ಕೊಟ್ಟಿದ್ದಾರೆ.

ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರನ್ನ ನಿರ್ಮಿಸುವ ಉದ್ದೇಶದಿಂದ, ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರೊದಿಗೆ ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿಕೆ ಶಿವಕುಮಾರ್‌ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಿಡಿಎ, ಬಿಬಿಎಂಪಿ ಸೈಟ್ ಇರಲಿ, ಮನೆ ಕಟ್ಟದೇ ಖಾಲಿ ಬಿಟ್ಟರೆ ಡಬಲ್ ಟ್ಯಾಕ್ಸ್ ಕಟ್ಟಬೇಕಾಗುತ್ತೆ. ಅಥವಾ ಮನೆ ಕಟ್ಟದೇ ಇದ್ರೆ ಖಾಲಿ ಸೈಟನ್ನ ವಾಪಸ್‌ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಖಾಲಿ ಸೈಟನ್ನ ವಾಪಸ್ ಪಡೆಯುವಂತಹ ಕೆಲಸ ಆಗುತ್ತೆ. ಸರ್ಕಾರ ಮನೆ ಕಟ್ಟಲಿ ಅಂತ ಸೈಟ್‌ ಕೊಟ್ಟಿರೋದು, ಕಸ ಹಾಕಲಿ ಅಂತ ಅಲ್ಲ. ಖಾಲಿ ಸೈಟ್ ಮಾಡಿಕೊಂಡು ಕಸ ಹಾಕಿದ್ರೆ ಸಹಿಸಲ್ಲ. ಸರ್ಕಾರದಿಂದ ಪಡೆದ ಸೈಟ್‌ ಖಾಲಿ ಬಿಟ್ಟರೆ ಅಥವಾ ಮನೆ ಕಟ್ಟದೇ ಇದ್ರೆ, ಅದನ್ನ ವಾಪಸ್‌ ಪಡೆಯುವ ಕೆಲಸ ಆಗುತ್ತೆ ಎಂದಿದ್ದಾರೆ.

ಸರ್ಕಾರದಿಂದ ಹಂಚಿಕೆ ಆಗಿರುವ ಸೈಟ್‌ಗೆ ಈಗಿನ ಬೆಲೆ ಏನಿದೆ, ಆ ಹಣವನ್ನ ವಾಪಸ್ ಕೊಡ್ತೇವೆ. ಹಣ ಕೊಟ್ಟು ಸೈಟ್ ವಾಪಸ್ ಪಡೆಯುತ್ತೇವೆ. ಏಕೆಂದ್ರೆ ಕೆಲವರು ಸೈಟ್‌ ತೆಗೆದುಕೊಂಡು 20-30 ವರ್ಷಗಳಾದ್ರೂ ಮನೆ ಕಟ್ಟಿಲ್ಲ, ಹಾಗೇ ಖಾಲಿ ಬಿಟ್ಟಿದ್ದಾರೆ, ಕಸ ಸುರಿಯೋಕೆ ಇಟ್ಕೊಂಡಿದ್ದಾರೆ. ಆದ್ದರಿಂದ ಮನೆ ಕಟ್ಟದಿದ್ರೆ ಸೈಟ್‌ವಾಪಸ್‌ ಪಡೆಯೋದಾಗಿ ಎಚ್ಚರಿಕೆ ನೀಡಿದ್ದಾರೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !