October 13, 2026
Tuesday, October 13, 2026
spot_img

ಗರ್ಭವಾಸ್ಥೆಯಲ್ಲಿ ಸ್ಟ್ರೆಂಥ್ ಟ್ರೈನಿಂಗ್ ಮಾಡಬಹುದಾ? ಇದರಿಂದ ತಾಯಿ-ಮಗುವಿಗೆ ಏನ್ ಪ್ರಯೋಜನ?

ಗರ್ಭಾವಸ್ಥೆಯಲ್ಲಿ ಹೆಚ್ಚು ವಿಶ್ರಾಂತಿ ಪಡೆಯಬೇಕು, ವ್ಯಾಯಾಮ ಮಾಡಿದರೆ ಮಗುವಿಗೆ ತೊಂದರೆಯಾಗಬಹುದು ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲದೆ ಗರ್ಭಿಣಿಯರಿಗೆ ಸೂಕ್ತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು. ವೈದ್ಯರ ಸಲಹೆಯೊಂದಿಗೆ ವಾರಕ್ಕೆ ಸುಮಾರು 2.5 ಗಂಟೆಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುವುದು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ.

ನಿಯಮಿತ ದೈಹಿಕ ಚಟುವಟಿಕೆ ತಾಯಿಯ ಆರೋಗ್ಯವನ್ನು ಸುಧಾರಿಸುವ ಮೂಲಕ ಮಗುವಿನ ಬೆಳವಣಿಗೆಗೂ ನೆರವಾಗುತ್ತದೆ.

ನಿಧಾನದ ನಡಿಗೆ ಹಾಗೂ ಸೂಕ್ತ ವ್ಯಾಯಾಮ ಜೀರ್ಣಕ್ರಿಯೆಗೆ ನೆರವಾಗಿ ಮಲಬದ್ಧತೆ ಮತ್ತು ಗರ್ಭಾವಸ್ಥೆಯ ಅಸ್ವಸ್ಥತೆಗಳನ್ನು ಕಡಿಮೆ ಮಾಡುತ್ತದೆ.

ವೈದ್ಯರ ಮಾರ್ಗದರ್ಶನದಲ್ಲಿ ಮಾಡುವ ಪೆಲ್ವಿಕ್ ಫ್ಲೋರ್ ಮತ್ತು ಸೂಕ್ತ ಕೋರ್ ವ್ಯಾಯಾಮಗಳು ಮೂತ್ರ ನಿಯಂತ್ರಣ ಹಾಗೂ ಹೆರಿಗೆ ನಂತರದ ಚೇತರಿಕೆಗೆ ಸಹಾಯಕ

ಹೊಟ್ಟೆ ಬೆಳೆಯುತ್ತಿದ್ದಂತೆ ಬೆನ್ನು ಮತ್ತು ಭುಜಗಳ ಮೇಲೆ ಒತ್ತಡ ಹೆಚ್ಚಬಹುದು. ಸೂಕ್ತ ಶಕ್ತಿ ವ್ಯಾಯಾಮಗಳು ದೇಹದ ಭಂಗಿಯನ್ನು ಕಾಪಾಡಲು ನೆರವಾಗುತ್ತವೆ.

ಸೂಕ್ತ ವ್ಯಾಯಾಮಗಳು ಬೆನ್ನಿನ ಸ್ನಾಯುಗಳಿಗೆ ಬಲ ನೀಡಿ, ಕೆಲವು ಗರ್ಭಿಣಿಯರಲ್ಲಿ ಬೆನ್ನುನೋವು ಮತ್ತು ದೇಹದ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ನಿಯಮಿತ ದೈಹಿಕ ಚಟುವಟಿಕೆ ಆರೋಗ್ಯಕರ ತೂಕ ನಿರ್ವಹಣೆಗೆ ನೆರವಾಗುತ್ತದೆ. ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದಕ್ಕೂ ಇದು ಸಹಕಾರಿ.

ವ್ಯಾಯಾಮ ಮನಸ್ಸನ್ನು ಉಲ್ಲಾಸಗೊಳಿಸಿ, ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಸಕ್ರಿಯವಾಗಿರುವುದು ಹೆರಿಗೆ ನಂತರ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಹಾಯ ಮಾಡಬಹುದು.

ಗರ್ಭಾವಸ್ಥೆಯಲ್ಲಿ ವ್ಯಾಯಾಮ ಸಂಪೂರ್ಣವಾಗಿ ಮಾಡಲೇ ಬಾರದು ಅನ್ನುವಂತಿಲ್ಲ. ಆದರೆ ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಮುಖ್ಯ. ರಕ್ತಸ್ರಾವ, ತಲೆಸುತ್ತು, ಎದೆನೋವು, ಉಸಿರಾಟದ ತೊಂದರೆ ಅಥವಾ ನೋವು ಕಂಡುಬಂದರೆ ವ್ಯಾಯಾಮ ನಿಲ್ಲಿಸಿ ವೈದ್ಯಕೀಯ ನೆರವು ಪಡೆಯಬೇಕು. ತಾಯಿ ಮತ್ತು ಮಗುವಿನ ಸುರಕ್ಷತೆಯೇ ಮೊದಲ ಆದ್ಯತೆ. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read