ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಖ್ಯಾತ ಪರ್ವತಾರೋಹಿ, ನೇಪಾಳ ಮೂಲದ ನಿರ್ಮಲ್ ‘ನಿಮ್ಸ್ದೈ’ ಪುರ್ಜಾ ಅವರು ಪಾಕಿಸ್ತಾನ ಆಡಳಿತದ ಕಾರಾಕೊರಂ ಪರ್ವತಶ್ರೇಣಿಯ ಬ್ರಾಡ್ ಪೀಕ್ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಮೃತಪಟ್ಟಿದ್ದಾರೆ. ಅವರೊಂದಿಗೆ ಕಾಣೆಯಾಗಿದ್ದ ಇತರ ಪರ್ವತಾರೋಹಿಗಳೂ ದುರಂತದಲ್ಲಿ ಸಾವನ್ನಪ್ಪಿರುವುದನ್ನು ಅವರ ಸಾಹಸ ಸಂಸ್ಥೆ ದೃಢಪಡಿಸಿದೆ.
ಶುಕ್ರವಾರ ಬ್ರಾಡ್ ಪೀಕ್ನ ಪಶ್ಚಿಮ ರಿಡ್ಜ್ ಮಾರ್ಗದಲ್ಲಿ ಹಿಮಕುಸಿತ ಸಂಭವಿಸಿದ ಬಳಿಕ ಪುರ್ಜಾ ಸೇರಿದಂತೆ ಆರು ಮಂದಿ ಸಂಪರ್ಕ ಕಳೆದುಕೊಂಡಿದ್ದರು. ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅವರು ಬದುಕುಳಿದಿಲ್ಲ ಎಂಬುದು ಖಚಿತವಾಗಿದೆ.
ಇದನ್ನೂ ಓದಿ:
ಪುರ್ಜಾ ಅವರೊಂದಿಗೆ ಅನುಭವಿ ಮಾರ್ಗದರ್ಶಕರಾದ ಪುರ್ ಬಹಾದೂರ್ ಗುರುಂಗ್ (ಯುಕ್ತಾ) ಹಾಗೂ ನಿಮಾ ಶೆರ್ಪಾ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಸಂಸ್ಥೆ ಸಂತಾಪ ಸೂಚಿಸಿದೆ.
ವಿಶ್ವದ 12ನೇ ಅತಿ ಎತ್ತರದ ಶಿಖರವಾಗಿರುವ ಬ್ರಾಡ್ ಪೀಕ್, ಕೆ2 ಸಮೀಪದ ಕಾರಾಕೊರಂ ಪರ್ವತಶ್ರೇಣಿಯಲ್ಲಿ ನೆಲೆಗೊಂಡಿದೆ. ಈ ದುರಂತ ಪರ್ವತಾರೋಹಣ ಕ್ಷೇತ್ರಕ್ಕೆ ಭಾರೀ ಆಘಾತ ಉಂಟುಮಾಡಿದೆ.



