October 9, 2026
Friday, October 9, 2026
spot_img

ದೆಹಲಿ ಪ್ರತಿಭಟನೆ ವಿವಾದ: ಕ್ಷಮೆಯಾಚಿಸಿದ ಯುವತಿಗೆ ಕಂಗನಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಪ್ರಕರಣದಲ್ಲಿ ಕ್ಷಮೆಯಾಚಿಸಿರುವ ಯುವತಿಯ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಯುವತಿಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ಮಕ್ಕಳನ್ನು ತಪ್ಪು ಪ್ರಭಾವದಿಂದ ರಕ್ಷಿಸುವಂತೆ ಪೋಷಕರಿಗೆ ಕರೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ಪೋಸ್ಟ್

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕ್ಷಮೆಯಾಚಿಸಿರುವ ಯುವತಿಯ ಚಿತ್ರವನ್ನು ಹಂಚಿಕೊಂಡ ಕಂಗನಾ, ಪ್ರತಿಭಟನೆ ವೇಳೆ ಇತರರ ಪ್ರಭಾವಕ್ಕೆ ಒಳಗಾಗಿ ಆಕೆ ಆ ರೀತಿಯ ಹೇಳಿಕೆ ನೀಡಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ಮತ್ತು ಯುವತಿಯರು ತಪ್ಪು ದಾರಿಯಲ್ಲಿ ಸಾಗದಂತೆ ಕುಟುಂಬಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ವಯಸ್ಸಿನ ಬಗ್ಗೆ ಗೊಂದಲ

ಪ್ರತಿಭಟನೆಯ ಬಳಿಕ ವೈರಲ್ ಆದ ಕ್ಷಮಾಪಣೆ ವಿಡಿಯೋದಲ್ಲಿ ಯುವತಿ ತನ್ನ ವಯಸ್ಸು 15 ವರ್ಷ ಎಂದು ಹೇಳಿಕೊಂಡಿದ್ದಾಳೆ. ಆದರೆ ಕೆಲವು ಮಾಧ್ಯಮ ವರದಿಗಳು ಹಾಗೂ ಎಫ್‌ಐಆರ್ ದಾಖಲೆಗಳ ಪ್ರಕಾರ ಆಕೆಯ ವಯಸ್ಸು 25 ವರ್ಷ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಆಕೆಯ ವಯಸ್ಸಿನ ಕುರಿತು ಗೊಂದಲ ಮುಂದುವರಿದಿದೆ.

Must Read