August 3, 2026
Monday, August 3, 2026
spot_img

ಗ್ಲಾಸ್ಗೋ ಅಖಾಡದಲ್ಲಿ ಆಸೀಸ್ ಪಾರಮ್ಯ: ಪದಕ ಬೇಟೆಯಲ್ಲಿ ಕಮಾಲ್ ಮಾಡಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಕಾಟ್‌ಲ್ಯಾಂಡ್‌ ನಗರವಾದ ಗ್ಲಾಸ್ಗೋದಲ್ಲಿ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಅತ್ಯಂತ ವೈಭವದಿಂದ ಜರುಗಿದ 2026 ರ ಕಾಮನ್‌ವೆಲ್ತ್ ಗೇಮ್ಸ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳ ಸಾವಿರಾರು ಅಥ್ಲೀಟ್‌ಗಳು ಈ ಜಾಗತಿಕ ಕ್ರೀಡಾ ಸಂಗಮದಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.

ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನ

ಕಾಮನ್‌ವೆಲ್ತ್ ಇತಿಹಾಸದಲ್ಲೇ ತನ್ನ ಸಾರ್ವಭೌಮತ್ವ ಕಾಯ್ದುಕೊಂಡಿರುವ ಆಸ್ಟ್ರೇಲಿಯಾ, ಈ ಬಾರಿಯೂ ಅಗ್ರಸ್ಥಾನ ಗಳಿಸಿದೆ. ಒಟ್ಟು 70 ಚಿನ್ನ, 45 ಬೆಳ್ಳಿ ಹಾಗೂ 56 ಕಂಚಿನೊಂದಿಗೆ 171 ಪದಕಗಳನ್ನು ಬಾಚಿಕೊಂಡು ಪ್ರಥಮ ಸ್ಥಾನ ಅಲಂಕರಿಸಿದೆ. 110 ಪದಕ ಗೆದ್ದ ಇಂಗ್ಲೆಂಡ್ ದ್ವಿತೀಯ ಹಾಗೂ 62 ಪದಕ ಪಡೆದ ಕೆನಡಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಭಾರತೀಯ ಅಥ್ಲೀಟ್‌ಗಳ ಐತಿಹಾಸಿಕ ಸಾಧನೆ

ಈ ಬಾರಿಯ ಕೂಟವು ಭಾರತಕ್ಕೆ ದೊಡ್ಡ ಸವಾಲಾಗಿತ್ತು. ಭಾರತಕ್ಕೆ ಸದಾ ಹೆಚ್ಚು ಪದಕ ತಂದುಕೊಡುತ್ತಿದ್ದ ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಹಾಗೂ ಹಾಕಿಯಂತಹ ಕ್ರೀಡೆಗಳನ್ನು ಈ ಆವೃತ್ತಿಯಿಂದ ಕೈಬಿಡಲಾಗಿತ್ತು.

ಆದರೂ ಎದೆಗುಂದದ ಭಾರತೀಯ ಅಥ್ಲೀಟ್‌ಗಳು ಅದ್ಭುತ ಹೋರಾಟ ನಡೆಸಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನೊಂದಿಗೆ ಒಟ್ಟು 39 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತವು ಪದಕ ಪಟ್ಟಿಯಲ್ಲಿ ಗೌರವಾನ್ವಿತ 4 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !