ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇಗವಾಗಿ ಚಲಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ವಾಹನ ಮೂರು ಭಾಗವಾಗಿ ತುಂಡಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಹರಿಗೆ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾಗಿದ್ದು, ಅಪಘಾತದ ವೇಗಕ್ಕೆ ಕಾರು ಮೂರು ಭಾಗವಾಗಿ ತುಂಡಾಗಿದೆ. ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸೀಗೆಹಟ್ಟಿ ನಿವಾಸಿ ಗುರುರಾಜ್ ಮೃತರು. ಇಂದು ಬೆಳಗಿನ ಜಾವ ಎರಡು ಗಂಟೆಗೆ ಹರಿಗೆ ಹಾಗೂ ಮಲವಗೊಪ್ಪ ಗ್ರಾಮದ ನಡುವೆ ಈ ಅಪಘಾತ ಸಂಭವಿಸಿದೆ. ಗುರುರಾಜ್ ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವಾಗ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿದೆ.
ಮೃತ ಗುರುರಾಜ್ ಆಟೋ ಚಾಲಕರಾಗಿದ್ದು, ಪರ್ಸನಲ್ ಕಾರಣದಿಂದಾಗಿ ಹೊಂಡಾ ಸಿಟಿ ಕಾರಿನಲ್ಲಿ ಭದ್ರಾವತಿಗೆ ತೆರಳುತ್ತಿದ್ದರು. ಈ ಕಾರು ಭಂಡಾರಿ ಗ್ಯಾಸ್ ಏಜೆನ್ಸಿಗೆ ಸೇರಿದ್ದು ಎನ್ನಲಾಗಿದೆ.
ಶಿವಮೊಗ್ಗದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



