ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ಕಲ್ಪಿಸಲಾಗಿದೆ.
ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಗಸ್ಟ್ ಎರಡರಂದು ನಡೆದ ಸಾಮಾನ್ಯ ಜ್ಞಾನ ಪರೀಕ್ಷಿಯ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ.
ಈ ಪ್ರಕಟಿತ ಕೀ ಉತ್ತರಗಳಿಗೆ ಅಭ್ಯರ್ಥಿಗಳ ಆಕ್ಷೇಪಣೆ, ಅಭ್ಯಂತರ ಇದ್ದರೆ ಆಗಸ್ಟ್ ಆರನೇ ತಾರೀಖಿನ ಬೆಳಗ್ಗೆ 10:30 ರ ಒಳಗಾಗಿ ಪ್ರಾಧಿಕಾರದ ಆನ್‌ಲೈನ್ ಪೋರ್ಟಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಏನೆಲ್ಲಾ ಇರಬೇಕು?
ಪತ್ರಿಕೆಯ ವಿವರ
ಪರೀಕ್ಷಾ ದಿನಾಂಕ
ವರ್ಷನ್ ಕೋಡ್
ಪ್ರಶ್ನೆ ಸಂಖ್ಯೆ
ಬೆಂಬಲಿತ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ಪಿಡಿಎಫ್ ರೂಪದಲ್ಲಿ ಲಗತ್ತಿಸಬೇಕು.
ಆಕ್ಷೇಪಣೆಗೆ 25 ರೂ. ಶುಲ್ಕ ಪಾವತಿ
ಸಲ್ಲಿಸುವ ಪ್ರತಿ ಆಕ್ಷೇಪಣೆಗೆ 25 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈ ಶುಲ್ಕವನ್ನು ಮತ್ತೆ ಕೊಡಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದಿದ್ದಲ್ಲಿ, ಅಪೂರ್ಣ/ಆಧಾರರಹಿತ ದಾಖಲೆಗಳನ್ನು ಲಗತ್ತಿಸಿದ್ದಲ್ಲಿ ಹಾಗೂ ನಿಗದಿತ ಶುಲ್ಕ ಪಾವತಿಸದಿದ್ದರೆ ಅಂತಹ ಆಕ್ಷೇಪಣೆಗಳನ್ನು ಪ್ರಾಧಿಕಾರ ತಿರಸ್ಕರಿಸಲಿದೆ.
ವಿಷಯ ತಜ್ಞರ ಸಮಿತಿಯು ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಕೀ ಉತ್ತರಗಳೇ ಅಂತಿಮವಾಗಿರಲಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೀ ಉತ್ತರದ ಲಿಂಕ್ ಇಲ್ಲಿದೆ:
https://cetonline.karnataka.gov.in/keawebentry456/cpcrpc2026/CPC_RPC_KEY_finalkannada.pdf
ಆಕ್ಷೇಪಣೆ ಸಲ್ಲಿಸುವ ಲಿಂಕ್:
https://cetonline.karnataka.gov.in/keaobjections/forms/login.aspx



