October 12, 2026
Monday, October 12, 2026
spot_img

ವರುಣ ದೇವನ ಕೃಪೆಗಾಗಿ ಪ್ರಾರ್ಥನೆ: ಆಂಜನೇಯ ಸನ್ನಿಧಾನದಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷ ಗಾಲಿ ಸೋಮಶೇಖರ್ ರೆಡ್ಡಿ ವಿಶೇಷ ಪೂಜೆ

ಹೊಸದಿಗಂತ ವರದಿ ಬಳ್ಳಾರಿ:

ವರುಣ ಕೃಪೆಯಿಂದ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಬೇಗನೆ ಭರ್ತಿಯಾಗಲೀ, ನಾಡಿನ ಅನ್ನದಾತರ ಬದುಕು ಹಸನಾಗಲಿ, ರೈತರ ಸಂಕಷ್ಟ ದೂರವಾಗಲಿ ಎನ್ನುವ ಸಂಕಲ್ಪದೊಂದಿಗೆ ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಗಾಲಿ ಸೋಮಶೇಖರ್ ಅವರು ಆಷಾಡ ಶನಿವಾರ ಬೆಳಿಗ್ಗೆ ಹೊಸಪೇಟೆಯ ತುಂಗಭದ್ರ ಜಲಾಶಯದ ಮೇಲಿರುವ ಶ್ರೀ ವೈಕುಂಠ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, 108 ಬಾರಿ ಹನುಮಾನ್ ಚಾಲೀಸಾ ಮಂತ್ರವನ್ನು ಭಕ್ತಿಯಿಂದ ಪಠಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತುಂಗಭದ್ರ ಜಲಾಶಯವು ಸಂಪೂರ್ಣ ಭರ್ತಿಯಾಗಲಿ, ನಮ್ಮ ರೈತರ ಬದುಕು ಹಸನಾಗಲಿ, ಬೆಳೆಗಳು ಹಸಿರಿನಿಂದ ಕಂಗೊಳಿಸಲಿ, ರೈತರ ಎಲ್ಲ ಸಂಕಷ್ಟಗಳು ದೂರವಾಗಲಿ, ವರುಣನ ಕೃಪೆಯಿಂದ ತುಂಗಭದ್ರೆಯ ಒಡಲು ಬೇಗನೆ ಭರ್ತಿಯಾಗಿ, ತುಂಬಿ ತುಳುಕಲಿ, ಎಲ್ಲ ಕಾಲುವೆಗಳಲ್ಲಿ ನೀರು ಹರಿಯಲಿ, ಬಯಲು ಸೀಮೆಯ ಬರಡು ಭೂಮಿ ಹಸಿರಾಗಲಿ, ರೈತರ ಹೊಲಗಳಲ್ಲಿ ಸಮೃದ್ಧಿಯ ಬೆಳೆ ನಳನಳಿಸಲಿ ಎಂದು ಪ್ರಾರ್ಥಿಸಿ ಶ್ರೀ ಹನುಮಂತ ದೇವರ ಸನ್ನಿಧಾನದಲ್ಲಿ 108 ಬಾರಿ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಿ, ವಾಯುದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:

ಈ ಹಿಂದೆ ಭೀಕರ ಬರ ಆವರಿಸಿದಾಗ ಇದೇ ವಾಯುದೇವರ ಸನ್ನಿಧಾನದಲ್ಲಿ ಗಾಲಿ ಸೋಮಶೇಖರ್ ರೆಡ್ಡಿ ಅವರು, ವಿಶೇಷ ಪೂಜೆ, ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಿದ್ದರು. ಮರು ದಿನವೇ ವರುಣ ಕಣ್ತೆರೆದಿದ್ದನ್ನು ಸ್ಮರಿಸಬಹುದು.

Must Read