ಮೇಷ
ಏಕಾಂಗಿತನ ಕಾಡಲಿದೆ. ಎಲ್ಲರು ನಿಮ್ಮನ್ನು ಕಡೆಗಣಿಸುವರು ಎಂಬ ಭಾವನೆ. ನಿಜವಾಗಿ ಇದು ನಿಮ್ಮ ಭ್ರಮೆ. ಎಲ್ಲರ ವಿಶ್ವಾಸಕ್ಕೆ ತೆಗೆದುಕೊಳ್ಳಿ.
ವೃಷಭ
ನಿಮ್ಮ ನಿಷ್ಠೆಯನ್ನು ಪ್ರಶ್ನಿಸಬಹುದು. ಅದಕ್ಕೆ ಧೃತಿಗೆಡದಿರಿ. ಸಮಯದೊಳಗೆ ನಿಮ್ಮ ಕೆಲಸ ಮುಗಿಸಿ. ಬಾಕಿ ಇಡಬೇಡಿ. ಧನಪ್ರಾಪ್ತಿ.
ಮಿಥುನ
ಆಶಾವಾದ ಬಿಡಬೇಡಿ. ನಿಮ್ಮ ಕಷ್ಟ ಪರಿಹಾರ ಖಂಡಿತ. ಆದರೆ ಮಧ್ಯಾಹ್ನ ತನಕ ಚಿಂತೆ ಪಡುವ ಸ್ಥಿತಿ ತಪ್ಪಿಸಲಾಗದು.
ಕಟಕ
ಭಾವನಾತ್ಮಕ ಏರುಪೇರು. ಕೆಲವು ಹಿಂಜರಿಕೆ ಕಾಡಬಹುದು. ಆದರೆ ಭೀತಿ ಅನಗತ್ಯ. ದೇವರ ಕೃಪೆ ಕಷ್ಟದಿಂದ ಪಾರು ಮಾಡಲಿದೆ.
ಸಿಂಹ
ನಿರ್ಣಾಯಕ ನಿರ್ಧಾರ ತಾಳಲು ಹಿಂಜರಿಕೆ ಬೇಕಿಲ್ಲ. ನೀವು ಬಯಸಿದಂತೆ ಆಗಲಿದೆ. ನಿಮ್ಮ ವಿರೋಧಿಗಳು ಸೋಲು ಕಾಣುವರು.
ಕನ್ಯಾ
ಬಿಕ್ಕಟ್ಟಿಗೆ ತಕ್ಷಣ ಪ್ರತಿಕ್ರಿಯಿಸಬೇಡಿ. ಸ್ವಲ್ಪ ಕಾದು ನೋಡಿ. ಸಮಸ್ಯೆ ತಾನಾಗಿ ಪರಿಹಾರ ಕಾಣಲಿದೆ. ಕೌಟುಂಬಿಕ ವಿರಸ ಅಂತ್ಯ, ಸಹಕಾರ.
ತುಲಾ
ಇತರರ ಜತೆ ಅಭಿಪ್ರಾಯ ಹಂಚುವಾಗ ಜಾಗ್ರತೆ ವಹಿಸಿ. ತಪ್ಪರ್ಥ ಮೂಡದಿರಲಿ. ಅಪಪ್ರಚಾರಕ್ಕೆ ಗುರಿ ಆಗದಿರಿ. ಧನಲಾಭ.
ವೃಶ್ಚಿಕ
ನಿಮ್ಮ ಪ್ರಗತಿಗೆ ಕೆಲವು ಅಡ್ಡಿಗಳು ಕಾಡುತ್ತಿವೆ. ಈ ದಿನ ಅಂತಹ ಅಡ್ಡಿಗಳು ಮಾಯವಾಗುವ ಸಂಕೇತ ತೋರುತ್ತಿದೆ. ಒಟ್ಟಿನಲ್ಲಿ ಸಫಲತೆ ಸಿಗಲಿದೆ.
ಧನು
ಕಠಿಣ ಹೊಣೆ ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಬಿಗಿ ನಿಲುವು ಸಡಿಲಿಸಿ. ಇತರರ ಜತೆ ಆತ್ಮೀಯ ಹೊಂದಾಣಿಕೆ ಇರಲಿ.
ಮಕರ
ಸ್ಪಷ್ಟ ಚಿಂತನೆ ಸಮಸ್ಯೆ ಪರಿಹಾರಕ್ಕೆ ನೆರವಾಗಲಿದೆ. ಗೊಂದಲದ ಮನಸ್ಥಿತಿ ಮೊದಲು ದೂರ ಮಾಡಿ. ಕೆಲವರನ್ನು ಅನುನಯಿಸಿ ಕಾರ್ಯ ಸಾಧಿಸಿಕೊಳ್ಳಿ.
ಕುಂಭ
ಕೆಲಸಕ್ಕೆ ತಕ್ಷಣ ಫಲ ಸಿಗದು. ವಿಳಂಬ ಫಲ. ನಿಮ್ಮ ತಂತ್ರ ಬದಲಿಸಲು ಯೋಜಿಸಿ. ಕೌಟುಂಬಿಕ ಅಸಹಕಾರ ಹೆಚ್ಚು. ಹಣದ ಒತ್ತಡ ಕಾಡಲಿದೆ.
ಮೀನ
ನಿಮ್ಮ ಯೋಜನೆ ಬಗ್ಗೆ ಗೊಂದಲ ಕಾಡಲಿದೆ. ಸಣ್ಣಪುಟ್ಟ ಸಮಸ್ಯೆಗಳು ಬೆನ್ನು ಬಿಡದು. ಇನ್ನೂ ಕೆಲಕಾಲ ಇದು ನಿಮ್ಮನ್ನು ಅನುಸರಿಸಲಿದೆ.



