September 4, 2026
Friday, September 4, 2026
spot_img

SNACKS | ನಿಮ್ಮ ಸಂಜೆಯ ಕ್ರೇವಿಂಗ್ಸ್‌ಗೆ ಬೆಸ್ಟ್ ಆಪ್ಷನ್; ಇಲ್ಲಿದೆ ಸ್ಟ್ರೀಟ್ ಸ್ಟೈಲ್ ನಿಪ್ಪಟ್ಟು ಮಸಾಲ

ಸಂಜೆ ಆಗುತ್ತಿದ್ದಂತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಅಂತಹ ಸಂಜೆಯ ಹಸಿವಿಗೆ ಸ್ಟ್ರೀಟ್ ಸ್ಟೈಲ್ ‘ನಿಪ್ಪಟ್ಟು ಮಸಾಲ’ ಬೆಸ್ಟ್ ಆಪ್ಷನ್. ಇದನ್ನೂ ಮನೆಯಲ್ಲೇ ಕೇವಲ 5 ನಿಮಿಷಗಳಲ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ನಿಪ್ಪಟ್ಟು

ಈರುಳ್ಳಿ

ಕ್ಯಾರೆಟ್

ಟೊಮೆಟೊ

ಕೊತ್ತಂಬರಿ ಸೊಪ್ಪು

ಕಡಲೆಬೀಜ

ಖಾರ ಸೇವ್

ಹಸಿರು ಚಟ್ನಿ

ಸಿಹಿ ಚಟ್ನಿ

ಖಾರದ ಪುಡಿ

ಚಾಟ್ ಮಸಾಲ

ನಿಂಬೆ ರಸ

ಮಾಡುವ ವಿಧಾನ

ಒಂದು ಅಗಲವಾದ ಪ್ಲೇಟ್‌ನಲ್ಲಿ 4-5 ನಿಪ್ಪಟ್ಟುಗಳನ್ನು ಇಟ್ಟು, ಅವುಗಳನ್ನು ದೊಡ್ಡದಾಗಿ ಮುರಿದು ಅದರ ಮೇಲೆ ಹಸಿರು ಚಟ್ನಿ ಮತ್ತು ಸಿಹಿ ಚಟ್ನಿಯನ್ನು ಸಮವಾಗಿ ಹಾಕಿ.  ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ ಮತ್ತು ತುರಿದ ಕ್ಯಾರೆಟ್ ಅನ್ನು ಹರಡಿ. ಬಳಿಕ ಖಾರದ ಪುಡಿ ಮತ್ತು ಚಾಟ್ ಮಸಾಲವನ್ನು ಲಘುವಾಗಿ ಉದುರಿಸಿ. ಇದರ ಮೇಲೆ ಕಡಲೆಬೀಜ ಮತ್ತು ಖಾರ ಸೇವ್ ಅನ್ನು ಹಾಕಬೇಕು. ಕೊನೆಯದಾಗಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಮೇಲಿಂದ ಉದುರಿಸಿದರೆ, ನಿಪ್ಪಟ್ಟು ಮಸಾಲ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !