August 14, 2026
Friday, August 14, 2026
spot_img

ವಾಸನೆ ಇಷ್ಟ ಇಲ್ಲ ಅನ್ನೋ ಕಾರಣಕ್ಕೆ ಮೂಲಂಗಿ ಬೇಡ ಅನ್ಬೇಡಿ, ಒಂದೊಳ್ಳೆ ಸಿಂಪಲ್‌ ರೆಸಿಪಿ ಟ್ರೈ ಮಾಡಿ ನೋಡಿ

ಮೂಲಂಗಿ ಹಲವು ಸಮಸ್ಯೆಗಳಿಗೆ ರಾಮಬಾಣ. ಆರೋಗ್ಯವಂತ ಜೀರ್ಣಕ್ರಿಯೆ, ಮಲಬದ್ಧತೆ ದೂರ ಮಾಡಲು ನಿತ್ಯವೂ ಮೂಲಂಗಿ ಸೇವನೆ ಮಾಡುವುದು ಉತ್ತಮ, ಪೈಲ್ಸ್‌ ಸಮಸ್ಯೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಮೂಲಂಗಿಯನ್ನೇ ತಿನ್ನುತ್ತಾರೆ.

ಸಾಮಾಗ್ರಿಗಳು : ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಕರಿಬೇವು ಹಸಿಮೆಣಸು ಈರುಳ್ಳಿ ಉಪ್ಪು ಮೂಲಂಗಿ ಕೊತ್ತಂಬರಿ ಸೊಪ್ಪು ನಿಂಬೆಹುಳಿ

ಮಾಡುವ ವಿಧಾನ

ಮೊದಲು ಮೂಲಂಗಿಯನ್ನು ತುರಿದುಕೊಂಡು ಪಕ್ಕಕ್ಕಿಡಿ. ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಗೂ ಕರಿಬೇವು ಹಾಕಿ ಬಾಡಿಸಿ

ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ, ನಂತರ ಉಪ್ಪು ಹಾಕಿ, ತುರಿದ ಮೂಲಂಗಿ ಹಾಕಿ ದೊಡ್ಡ ಉರಿಯಲ್ಲಿ ಬಿಡಿ

ನೀರೆಲ್ಲ ಇಂಗಿದ ನಂತರ ಒಂದೆರಡು ಹನಿ ನಿಂಬೆಹುಳಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಸಿಂಪಲ್‌ ಪಲ್ಯ ರೆಡಿ. ಇದಕ್ಕೆ ಹಾಕುವ ನಿಂಬೆಹುಳಿಯಿಂದಾಗಿ ನಿಮಗೆ ಮೂಲಂಗಿಯ ವಾಸನೆಯಾಗಲಿ, ಖಾರವಾಗಲೀ ಇದರಲ್ಲಿ ಬರೋದೇ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !