October 12, 2026
Monday, October 12, 2026
spot_img

ಶಿವಂ ಅಸೋಸಿಯೇಟ್ಸ್ ಹೂಡಿಕೆ ವಂಚನೆ: ಶಿವಾನಂದ ನೀಲಣ್ಣನವರ್ ಬಂಧನ, 12 ದಿನ ಇಡಿ ಕಸ್ಟಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಂ ಅಸೋಸಿಯೇಟ್ಸ್‌ ಹೂಡಿಕೆ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಆರೋಪಿಯಾಗಿರುವ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಅವರನ್ನು ಮಂಗಳೂರು ವಲಯದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರಿನ ವಿಶೇಷ ಇಡಿ ನ್ಯಾಯಾಲಯ ಆರೋಪಿಯನ್ನು 12 ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.

₹2,110 ಕೋಟಿ ಅಕ್ರಮ ಸಂಗ್ರಹ ಆರೋಪ

ಇಡಿ ತನಿಖೆಯ ಪ್ರಕಾರ, ಶಿವಂ ಅಸೋಸಿಯೇಟ್ಸ್‌ ಸಂಸ್ಥೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢದಲ್ಲಿ ಪೋಂಜಿ ಮಾದರಿಯ ಹೂಡಿಕೆ ಯೋಜನೆಗಳ ಮೂಲಕ ಸಾರ್ವಜನಿಕರಿಂದ ಸುಮಾರು ₹2,110.97 ಕೋಟಿ ಸಂಗ್ರಹಿಸಿರುವ ಆರೋಪವಿದೆ.

2019ರಿಂದ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಹೊಸ ಹೂಡಿಕೆದಾರರಿಂದ ಪಡೆದ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ಪಾವತಿಸಲು ಬಳಸಲಾಗಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.

ಐಷಾರಾಮಿ ಜೀವನಕ್ಕೆ ಹಣ ಬಳಕೆ ಆರೋಪ

ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಐಷಾರಾಮಿ ವಾಹನಗಳು, ಬಂಗಲೆಗಳು, ಸ್ಥಿರಾಸ್ತಿ ಹಾಗೂ ಚಲನಚಿತ್ರ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ವರ್ಗಾಯಿಸಿರುವ ಆರೋಪವೂ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಮುಂದುವರಿಸಿದೆ.

Must Read