October 17, 2026
Saturday, October 17, 2026
spot_img

ಬೆಂಗಳೂರಿನಲ್ಲಿ ತಂದೆ ಮಗನ ಅನುಮಾನಾಸ್ಪದ ಸಾ*ವು: ಮೈ ತುಂಬಾ ಗಾಯದ ಗುರುತು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಚಿಕ್ಕಬಾಣಾವಾರದ ಗುಡ್ಡೆ ಬಸವಾಪುರದಲ್ಲಿ ತಂದೆ ಹಾಗೂ ಐದು ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

38 ವರ್ಷದ ಅಭಿನವ್‌ ಹಾಗೂ ಅವರ ಐದು ವರ್ಷದ ಮಗ ಯದುವೀರ್‌ ಮೃತರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣಿಸುತ್ತಿಲ್ಲ. ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದು ಕೊಲೆ ಎನ್ನುವ ಶಂಕೆ ಎದುರಾಗಿದೆ.

ಅಭಿನವ್‌ ಹಾಗೂ ಯದುವೀರ್‌ ಮೃತದೇಹ ಒಂದು ರೂಮಿನಲ್ಲಿದ್ದರೆ ಅವರ ಪತ್ನಿ ಪಕ್ಕದ ರೂಮಿನಲ್ಲಿ ನಿದ್ದೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ಪತ್ನಿಯ ಮೇಲೆ ಅನುಮಾನ ವ್ಯಕ್ತವಾಗಿದ್ದು, ಅವರನ್ನು ವಿಚಾರಣೆಗೆ ಪೊಲೀಸರು ಕರೆದೊಯ್ದಿದ್ದಾರೆ.

ಇದು ಕೊಲೆ ಎನ್ನುವುದಾದರೆ ಪಕ್ಕದ ರೂಮಿನಲ್ಲಿ ಪತಿ ಹಾಗೂ ಮಗನನ್ನು ಯಾರೋ ಹೊಡೆದು ಕೊಂದರೂ ಪತ್ನಿಗೆ ಗೊತ್ತಾಗದಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದುರಾಗಿದೆ. ಪತ್ನಿಯೇ ಕೊಲೆ ಮಾಡಿ ಅನುಮಾನ ಬರಬಾರದೆಂದು ಮನೆಯಲ್ಲಿಯೇ ಇದ್ದರಾ ಎನ್ನುವ ಸುತ್ತಲೂ ವಿಚಾರಣೆ ನಡೆಯುತ್ತಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಾಣವಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ತಂದೆ-ಮಗನ ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Must Read