August 17, 2026
Monday, August 17, 2026
spot_img

ಆ.28ರ ಒಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ : ಮಧು ಬಂಗಾರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ತಿಂಗಳ ಅಂತ್ಯದೊಳಗೆ ಬಾಕಿ ಇರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಹಾಗೂ ಸಾಕ್ಸ್‌ ವಿತರಣೆ ಮಾಡುತ್ತೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯೆ ಬಲ್ಕಿಸ್‌ ಬಾನು ಪ್ರಶ್ನೆಯೆತ್ತಿದ್ದು, ಇದೇ ತಿಂಗಳ 28ರ ಒಳಗೆ ಬಾಕಿ ಇರುವ ಎಲ್ಲ ಶೂ ಹಾಗೂ ಸಾಕ್ಸ್‌ಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಮಕ್ಕಳು ಶಾಲೆಗೆ ಬರಲಿ ಎಂದು ಶೂ ಸಾಕ್ಸ್‌ ನೀಡಲಾಗುತ್ತದೆ. ಆದರೆ ಈವರೆಗೂ ರಾಜ್ಯದಲ್ಲಿ ಶೇ. ನೂರರಷ್ಟು ವಿತರಣೆ ಆಗಿಲ್ಲ. ಶಾಲೆ ಆರಂಭವಾಗಿರುವುದು ಜೂನ್‌ನಲ್ಲಿ, ಇದೀಗ ಆಗಸ್ಟ್‌! ಇಷ್ಟು ತಿಂಗಳಾದರೂ ಮಕ್ಕಳಿಗೆ ಶೂ ಸಾಕ್ಸ್‌ ವಿತರಣೆ ಮಾಡೋಕೆ ಆಗಿಲ್ವಾ? ಇದರ ಬಗ್ಗೆ ಕ್ರಮ ಆಗಬೇಕು. ಟೆಂಡರ್ ದಾರನ ಮೇಲೆ ಕ್ರಮ ಆಗಬೇಕು. ಇಂಡೆಂಟ್ ಕೊಡದ ಅಧಿಕಾರಿಗಳ ವಿರುದ್ದ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದಕ್ಕೆ ಮಧು ಬಂಗಾರಪ್ಪ ಉತ್ತರ ನೀಡಿದ್ದು, ನಮ್ಮ ಸರ್ಕಾರದಲ್ಲಿ ಇದನ್ನೆಲ್ಲಾ ಕೊಡ್ತಾ ಇದ್ದೀವಿ. ಹಿಂದಿನ ಸರ್ಕಾರದಲ್ಲಿ ಶೂ ಸಾಕ್ಸ್‌ ಕೊಟ್ಟಿರಲಿಲ್ಲ. ನಾವು ಕ್ವಾಲಿಟಿ ಇರುವ ಶೂ ಹಾಗೂ ಸಾಕ್ಸ್‌ಗಳನ್ನು ಕೊಡ್ತಾ ಇದಿವಿ. ಟೆಂಡರ್‌ ಕೊಟ್ಟಿದ್ದೆವು. ಅದು ತಡ ಆಗಿದೆ. ಸದ್ಯ ತಡ ಮಾಡಿರೋದಕ್ಕೆ ಅವರ ಮೇಲೂ ಫೈನ್‌ ಹಾಕಿದ್ದೇವೆ ಎಂದಿದ್ದಾರೆ.

ಮುಂದಿನ ವರ್ಷದಿಂದ ಸಮಸ್ಯೆ ಇಲ್ಲದಂತೆ ಶೂ, ಸಾಕ್ಸ್ ಕೊಡ್ತೀವಿ. 104 ಕೋಟಿ ಹಣ ಬಾಕಿ ಇದೆ. ಆದಷ್ಟು ಬೇಗ ಶೂ, ಸಾಕ್ಸ್ ವಿತರಣೆ ಮಾಡ್ತೀವಿ. ಶೂ, ಸಾಕ್ಸ್ ವಿತರಣೆಗೆ ನೋಡಲ್ ಆಫೀಸ್ ಇಟ್ಟು ಸಮಸ್ಯೆಯನ್ನ ಸರಿ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !