ನಾಗರ ಪಂಚಮಿ ಹಬ್ಬದ ವಿಶೇಷ ನೈವೇದ್ಯಗಳಲ್ಲಿ ‘ಎಳ್ಳು ಉಂಡೆ’ ಅತ್ಯಂತ ಪ್ರಮುಖವಾದದ್ದು. ಇದನ್ನು ಕೇವಲ 15 ನಿಮಿಷಗಳಲ್ಲಿ, ಯಾವುದೇ ಪಾಕದ ಜಂಜಾಟವಿಲ್ಲದೆ ಅತ್ಯಂತ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಕಪ್ಪು ಅಥವಾ ಬಿಳಿ ಎಳ್ಳು
ಬೆಲ್ಲ
ಶೇಂಗಾ
ಒಣ ಕೊಬ್ಬರಿ ತುರಿ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಮೊದಲು ಎಳ್ಳನ್ನು ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ಶೇಂಗಾವನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಇಟ್ಟುಕೊಂಡು, ಮಿಕ್ಸಿ ಜಾರಿಗೆ ಹುರಿದ ಶೇಂಗಾ, ಒಣ ಕೊಬ್ಬರಿ, ಏಲಕ್ಕಿ ಪುಡಿ ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ ಒಂದು ಸುತ್ತು ತಿರುಗಿಸಿ, ನಂತರ ಇದಕ್ಕೆ ಹುರಿದ ಎಳ್ಳನ್ನು ಸೇರಿಸಿ, ಮಿಕ್ಸಿಯನ್ನು ಒಂದೆರಡು ಸೆಕೆಂಡ್ ಮಾತ್ರ ಆನ್ ಮಾಡಿ ಆಫ್ ಮಾಡಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಮಿಶ್ರಣ ಬಿಸಿಯಾಗಿರುವಾಗಲೇ ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿದರೆ, ಸಾಂಪ್ರದಾಯಿಕ ಶೈಲಿಯ ರುಚಿಯಾದ ಎಳ್ಳು ಉಂಡೆ ಸಿದ್ಧ.



