ಶ್ರಾವಣ ಮಾಸದಲ್ಲಿ ಹೆಚ್ಚಿನವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಹಬ್ಬದ ದಿನಗಳ ಊಟದ ಜೊತೆಗೆ ನೆಂಜಿಕೊಳ್ಳಲು ದಿಢೀರ್ ಎಂದು ಮಾಡಬಹುದಾದ ಒಂದು ಗರಿಗರಿಯಾದ ಸೈಡ್ ಡಿಶ್ ಇಲ್ಲಿದೆ. ಕೇವಲ 10 ನಿಮಿಷದಲ್ಲಿ ಈ ಸ್ಪೆಷಲ್ ‘ಬದನೆಕಾಯಿ ತವಾ ಫ್ರೈ’ ಮಾಡಬಹುದು.
ಬೇಕಾಗುವ ಸಾಮಗ್ರಿಗಳು
ಬದನೆಕಾಯಿ
ಖಾರದ ಪುಡಿ
ಅರಿಶಿನ ಮತ್ತು ಗರಂ ಮಸಾಲಾ
ಅಕ್ಕಿ ಹಿಟ್ಟು ಅಥವಾ ರವೆ
ಉಪ್ಪು ಮತ್ತು ಎಣ್ಣೆ
ಮಾಡುವ ವಿಧಾನ
ಮೊದಲು ಒಂದು ಬಟ್ಟಲಿನಲ್ಲಿ ಖಾರದ ಪುಡಿ, ಅರಿಶಿನ, ಗರಂ ಮಸಾಲಾ ಮತ್ತು ಉಪ್ಪು ಹಾಕಿ, ಸ್ವಲ್ಪ ನೀರು ಸೇರಿಸಿ ಗಟ್ಟಿ ಪೇಸ್ಟ್ ಮಾಡಿ. ಹೆಚ್ಚಿದ ಬದನೆಕಾಯಿ ತುಂಡುಗಳಿಗೆ ಈ ಮಸಾಲೆಯನ್ನು ಎರಡು ಕಡೆ ಚೆನ್ನಾಗಿ ಹಚ್ಚಿ. ನಂತರ ಈ ತುಂಡುಗಳನ್ನು ಅಕ್ಕಿ ಹಿಟ್ಟು ಅಥವಾ ರವೆಯಲ್ಲಿ ಕೋಟಿಂಗ್ ಮಾಡಿ. ಕಾದ ತವಾದ ಮೇಲೆ ಎಣ್ಣೆ ಹಾಕಿ, ಬದನೆಕಾಯಿ ತುಂಡುಗಳನ್ನು ಇಟ್ಟು ಎರಡು ಬದಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿದರೆ ಗರಿಗರಿ ತವಾ ಫ್ರೈ ಸಿದ್ಧ.



