ಸಾಮಾಗ್ರಿಗಳು
ಫ್ರೆಶ್ ತೆಂಗಿನತುರಿ
ಬೆಲ್ಲ
ಏಲಕ್ಕಿ ಪುಡಿ
ಉಪ್ಪು
ಮೈದಾ
ಚಿರೋಟಿ ರವೆ
ಎಣ್ಣೆ
ಮಾಡುವ ವಿಧಾನ
ಮೊದಲು ಹೂರಣ ತಯಾರು ಮಾಡಲು ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ ಬೆಲ್ಲ ಹಾಕಿ, ಜೊತೆಗೆ ಸ್ವಲ್ಪ ನೀರು ಹಾಕಿ
ಬೆಲ್ಲ ಸ್ವಲ್ಪ ಗಟ್ಟಿಯಾದಂತೆ ಫ್ರೆಶ್ ಕಾಯಿತುರಿ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಐದು ನಿಮಿಷ ಬಾಡಿಸಿ ಆಫ್ ಮಾಡಿ
ತಣ್ಣಗಾದ ನಂತರ ಉಂಡೆ ಕಟ್ಟಿ ಒಟ್ಟುಕೊಳ್ಳಿ
ಇತ್ತ ಬೌಲ್ಗೆ ಮೈದಾಹಿಟ್ಟು, ಚಿರೋಟಿ ರವೆ, ಉಪ್ಪು, ನೀರು ಹಾಗೂ ಎಣ್ಣೆ ಹಾಕಿ ಮಿಕ್ಸ್ ಮಾಡಿ
ತೆಳುವಾಗಿ ಮಿಕ್ಸ್ ಆದ ನಂತರ ಮೇಲೆ ಎಣ್ಣೆ ಹಾಕಿ ಸ್ವಲ್ಪ ಸಮಯ ನೆನೆಯಲು ಬಿಡಿ
ನಂತರ ಕವರ್ ಮೇಲೆ ಹೋಳಿಗೆಯ ಹಿಟ್ಟು, ಹೂರಣ ಹಾಕಿ ತಟ್ಟಿ ಬೇಯಿಸಿದ್ರೆ ಕಾಯಿ ಒಬ್ಬಟ್ಟು ರೆಡಿ. ತುಪ್ಪದ ಜೊತೆ ಬಿಸಿ ಬಿಸಿ ಇದನ್ನು ತಿನ್ನಬಹುದು



