ಬೀಟ್ರೂಟ್ ದೇಹಕ್ಕೆ ತುಂಬಾ ಒಳ್ಳೆಯದು, ಆದರೆ ಕೆಲ ಮಕ್ಕಳು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ರೀತಿ ಕ್ರಿಸ್ಪಿ ‘ಬೀಟ್ರೂಟ್ ಚಿಪ್ಸ್’ ಮಾಡಿಕೊಡಬಹುದು.
ಬೇಕಾಗುವ ಸಾಮಗ್ರಿಗಳು
ಬೀಟ್ರೂಟ್
ಎಣ್ಣೆ
ಉಪ್ಪು
ಮೆಣಸಿನ ಪುಡಿ ಅಥವಾ ಕಾಳುಮೆಣಸಿನ ಪುಡಿ
ಚಾಟ್ ಮಸಾಲ
ಮಾಡುವ ವಿಧಾನ
ಮೊದಲು ಬೀಟ್ರೂಟ್ ಸಿಪ್ಪೆ ತೆಗೆದು, ತೆಳುವಾದ ಸ್ಲೈಸ್ ಮಾಡಿಕೊಳ್ಳಬೇಕು. ನಂತರ ಹೆಚ್ಚಿದ ಪೀಸ್‌ಗಳನ್ನು ಒಂದು ಬಟ್ಟೆಯ ಮೇಲೆ ಹರಡಿ, ಅದರ ಮೇಲಿರುವ ನೀರನ್ನು ಸಂಪೂರ್ಣವಾಗಿ ಒಣಗಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಧ್ಯಮ ಉರಿಯಲ್ಲಿ ಬೀಟ್ರೂಟ್ ಪೀಸ್‌ಗಳನ್ನು ಗರಿಗರಿಯಾಗುವವರೆಗೆ ಕರಿದು, ಎಣ್ಣೆಯಿಂದ ತೆಗೆದ ತಕ್ಷಣ ಅದಕ್ಕೆ ಉಪ್ಪು, ಖಾರ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ಬೆರೆಸಿದರೆ, ಕ್ರಿಸ್ಪಿ ಬೀಟ್ರೂಟ್ ಚಿಪ್ಸ್ ಸಿದ್ಧ.



