August 22, 2026
Saturday, August 22, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 66 | ರುಚಿಯೋ ರುಚಿ, ಜೊತೆಗೆ ಹೆಲ್ತ್‌ ಫುಲ್ ಖುಷಿ: ಇಂದೇ ಟ್ರೈ ಮಾಡಿ ಗರಿಗರಿ ವೆಜ್ ದೋಸೆ!

ಬೆಳಗ್ಗೆ ಎದ್ದ ತಕ್ಷಣ “ಇವತ್ತು ತಿಂಡಿಗೆ ಏನಪ್ಪಾ ಮಾಡೋದು?” ಅನ್ನೋ ಚಿಂತೆ ಪ್ರತಿಯೊಬ್ಬರ ಮನೆಯಲ್ಲೂ ಇದ್ದಿದ್ದೇ. ಅದಕ್ಕೆ ಬೆಸ್ಟ್ ಅಂದ್ರೆ ಈ ಪೌಷ್ಟಿಕಾಂಶ ತುಂಬಿರೋ ವೆಜ್ ತರಕಾರಿ ದೋಸೆ! ಇದನ್ನ ಮಾಡೋದು ಕೂಡ ತುಂಬಾ ಸುಲಭ, ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ಒಪ್ಶನ್.

ಬೇಕಾಗುವ ಸಾಮಗ್ರಿಗಳು

ದೋಸೆ ಹಿಟ್ಟು – 2 ಕಪ್

ಈರುಳ್ಳಿ – 1

ತುರಿದ ಕ್ಯಾರೆಟ್ – 1/2 ಕಪ್

ಕ್ಯಾಪ್ಸಿಕಂ – 1/4 ಕಪ್

ಟೊಮೆಟೊ – 1

ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು

ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎಣ್ಣೆ/ತುಪ್ಪ

ಮಾಡುವ ವಿಧಾನ

ಮೊದಲು ಕ್ಯಾರೆಟ್, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕಟ್ ಮಾಡ್ಕೊಂಡು ಒಂದು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಆದ್ಮೇಲೆ, ಗ್ಯಾಸ್ ಆನ್ ಮಾಡಿ ದೋಸೆ ಕಾವಲಿಯನ್ನು ಚೆನ್ನಾಗಿ ಕಾಯಿಸಿ, ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ. ಈಗ ಕಾಯ್ದ ಹಂಚಿನ ಮೇಲೆ ಒಂದು ಸೌಟು ದೋಸೆ ಹಿಟ್ಟು ಹಾಕಿ ತೆಳುವಾಗಿ ಹರಡಿ. ಇದಕ್ಕೆ ಈಗ ಮೊದಲೇ ರೆಡಿ ಮಾಡಿಟ್ಟುಕೊಂಡ ತರಕಾರಿ ಮಿಶ್ರಣವನ್ನು ದೋಸೆಯ ಮೇಲೆ ಉದುರಿಸಿ. ಈಗ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ದೋಸೆ ಗರಿಗರಿಯಾಗುವವರೆಗೆ ಬೇಯಿಸಿ.

ಇದೀಗ ಬಿಸಿಬಿಸಿಯಾದ, ಗರಿಗರಿಯಾದ ವೆಜ್ ದೋಸೆ ಸವಿಯಲು ಸಿದ್ಧ! ಇದನ್ನು ನಿಮ್ಮಿಷ್ಟದ ಕಾಯಿ ಚಟ್ನಿ ಅಥವಾ ಆಲೂಗಡ್ಡೆ ಪಲ್ಯದ ಜೊತೆ ತಿಂದರೆ ರುಚಿ ಸೂಪರ್!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !