August 22, 2026
Saturday, August 22, 2026
spot_img

ಮಾತುಕತೆ ಫೇಲ್, ಟ್ಯಾಕ್ಸ್ ಶುರು: ಅಮೆರಿಕಗೆ ತಕ್ಕ ತಿರುಗೇಟು ನೀಡಲು ಕೆನಡಾ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಕೆನಡಾ ನಡುವೆ ನಡೆಯುತ್ತಿದ್ದ ವ್ಯಾಪಾರ ಮಾತುಕತೆ ಕೊನೆಗೂ ಮುರಿದುಬಿದ್ದಿದೆ. ಇದರಿಂದ ಕೋಪಗೊಂಡ ಅಮೆರಿಕ, ಕೆನಡಾದಿಂದ ಬರುವ ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಬಿಸಿಯಾಗಿ 50% ಸುಂಕ (ಆಮದು ತೆರಿಗೆ) ಹೇರಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂದಿರುವ ಈ ಹೊಸ ತೆರಿಗೆ ನಿಯಮದಿಂದ ಕೆನಡಾ ಪ್ರತಿವರ್ಷ ಅಮೆರಿಕಕ್ಕೆ ಕಳುಹಿಸುವ ಒಟ್ಟು ವಸ್ತುಗಳ ಶೇ. 5 ರಷ್ಟು ಸರಕುಗಳ ಮೇಲೆ ನೇರ ಪರಿಣಾಮ ಬೀರಲಿದೆ. ಈ ಹೊಸ ತೆರಿಗೆ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಕೆನಡಾದ ತಿರುಗೇಟು

ಮಾತುಕತೆ ಮುರಿದುಬೀಳುತ್ತಿದ್ದಂತೆಯೇ ಕೆನಡಾದ ಪ್ರಧಾನಿ ಮಾರ್ಕೊ ಕಾರ್ನಿ ಅಮೆರಿಕಗೆ ನೇರ ಎಚ್ಚರಿಕೆ ನೀಡಿದ್ದಾರೆ. “ಅಮೆರಿಕ ತಂದಿರುವ ನಿಯಮಗಳು ತೀರಾ ಅನ್ಯಾಯದಿಂದ ಕೂಡಿದ್ದು, ಆರ್ಥಿಕವಾಗಿ ಯಾವುದೇ ಅರ್ಥವಿಲ್ಲದ್ದು. ಇಂಥ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿರುವ ಅವರು, ಅಮೆರಿಕದ ಈ ನಡೆಯ ವಿರುದ್ಧ ಕೆನಡಾ ಕೂಡ ಪ್ರತಿಸುಂಕ ವಿಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆನಡಾ ಸ್ವಾವಲಂಬನೆಯ ಹಾದಿ

ಈ ಸವಾಲಿನಿಂದಾಗಿ ಕೆನಡಾ ತನ್ನ ವಸ್ತುಗಳನ್ನು ಮಾರಾಟ ಮಾಡಲು ಜಗತ್ತಿನ ಇತರ ದೇಶಗಳ ಜೊತೆ ಹೊಸ ವ್ಯಾಪಾರ ಸಂಬಂಧಗಳನ್ನು ಬೆಳೆಸಿಕೊಳ್ಳಲು ದೊಡ್ಡ ಅವಕಾಶ ಸಿಕ್ಕಂತಾಗಿದೆ. ಹೊರಗಿನಿಂದ ಬರುವ ವಸ್ತುಗಳ ಮೇಲೆ ಸುಂಕ ಹೆಚ್ಚಾದಾಗ, ಕೆನಡಾ ತನ್ನ ದೇಶದ ಒಳಗಿನ ಉತ್ಪಾದಕರು ಮತ್ತು ಸ್ಥಳೀಯ ಉದ್ಯಮಗಳನ್ನು ಹೆಚ್ಚು ಉತ್ತೇಜಿಸಲು ಹಾದಿ ಸುಗಮವಾಗುತ್ತದೆ.

ನ್ಯಾಯಯುತ ನಿಲುವು

ಕೆನಡಾ ತನ್ನ ದೇಶದ ಹಿತಾಸಕ್ತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಲು ಅನ್ಯಾಯದ ಷರತ್ತುಗಳಿಗೆ ತಲೆಬಾಗದೆ ದಿಟ್ಟ ನಿರ್ಧಾರ ತಗೆದುಕೊಂಡಿರುವುದು ಕೆನಡಾದ ಆರ್ಥಿಕ ಸ್ಥಿರತೆಯನ್ನು ತೋರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !