ಬೆಳಗ್ಗೆ ತಿಂಡಿಗೆಂದು ಮಾಡಿದ ಚಪಾತಿಗಳು ಒಂದೆರಡು ಉಳಿಯುವುದು ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ. ಹಾಗಂತ ಅದನ್ನು ಎಸೆಯುವುದು ಸರಿಯಲ್ಲ. ಮಕ್ಕಳು ಶಾಲೆಯಿಂದ ಬಂದ ತಕ್ಷಣ ಏನಾದರೂ ಕೇಳುತ್ತಾರೆ. ಆಗ ಹೊರಗಿನ ನೂಡಲ್ಸ್ ಬದಲು ಈ ರೀತಿ ಹೆಲ್ದೀ ಚಪಾತಿ ನೂಡಲ್ಸ್ ಮಾಡಿಕೊಡಬಹುದು.
ಬೇಕಾಗುವ ಸಾಮಗ್ರಿಗಳು
ಚಪಾತಿ
ಎಣ್ಣೆ
ಈರುಳ್ಳಿ
ಟೊಮೆಟೊ
ಖಾರದ ಪುಡಿ
ಉಪ್ಪು
ಮಾಡುವ ವಿಧಾನ
ಮೊದಲುಚಪಾತಿಗಳನ್ನು ರೋಲ್ ಮಾಡಿ, ಚಾಕುವಿನಿಂದ ನೂಡಲ್ಸ್ ತರಹ ಉದ್ದಕ್ಕೆ ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು. ನಂತರ ಒಂದುಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಕೆಂಪಾಗುವರೆಗೂ ಹುರಿದು, ನಂತರ ಟೊಮೆಟೊ ಹಾಕಿ ಬಾಡಿಸಿಕೊಂಡ ನಂತರ ಅದೇ ಒಗ್ಗರಣೆಗೆ ಖಾರದ ಪುಡಿ, ಉಪ್ಪು ಹಾಕಿ ಕೈಯಾಡಿಸಿ. ಕೊನೆಯಲ್ಲಿ ಕತ್ತರಿಸಿದ ಚಪಾತಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ, ಬಿಸಿಬಿಸಿ ಚಪಾತಿ ನೂಡಲ್ಸ್ ಸಿದ್ಧ. ಇದಕ್ಕೆ ಬೇಕಾದರೆ ನೂಡಲ್ಸ್ ಮಸಾಲೆಯನ್ನು ಸಹ ಹಾಕಬಹುದು.



