August 23, 2026
Sunday, August 23, 2026
spot_img

Spicy | ಅನ್ನ-ತಿಳಿ ಸಾರಿನ ಜತೆ ನೆಂಚಿಕೊಳ್ಳಲು ಏನು ಇಲ್ವಾ: ಹಾಗಾದ್ರೆ ಈ ಮಸಾಲಾ ಬೆಂಡೆಕಾಯಿ ಫ್ರೈ ಟ್ರೈ ಮಾಡಿ

ಕೆಲವೊಮ್ಮೆ ಸರಳವಾದ ಅನ್ನ ಮತ್ತು ಬಿಸಿಬಿಸಿ ತಿಳಿ ಸಾರು ಇದ್ದರೆ ಸಾಕು ಅನ್ನಿಸುತ್ತೆ. ಆದರೆ ಅದರ ಜತೆ ನೆಂಚಿಕೊಳ್ಳಲು ಒಂದು ಚೂರು ಖಾರ ಖಾರವಾಗಿ, ಕ್ರಿಸ್ಪಿಯಾಗಿ ಏನಾದರೂ ಇದ್ದರೆ ಊಟದ ಮಜಾನೇ ಬೇರೆ. ಆಗ ಈ ರೀತಿ ಮಸಾಲಾ ಬೆಂಡೆಕಾಯಿ ಫ್ರೈ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಬೆಂಡೆಕಾಯಿ: ಕಾಲು ಕೆ.ಜಿ
ಎಣ್ಣೆ: 3 ಚಮಚ
ಕಡಲೆ ಹಿಟ್ಟು: 1 ಚಮಚ
ಅಚ್ಚಖಾರದ ಪುಡಿ: 1 ಚಮಚ
ಧನಿಯಾ ಪುಡಿ: 1 ಚಮಚ
ಜೀರಿಗೆ ಪುಡಿ: ಅರ್ಧ ಚಮಚ
ಅರಿಶಿನ ಪುಡಿ: ಕಾಲು ಚಮಚ
ಆಮ್‌ಚೂರ್ ಪುಡಿ : ಅರ್ಧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಬೆಂಡೆಕಾಯಿಯ ಎರಡು ಬದಿಯ ತುದಿಗಳನ್ನು ಕತ್ತರಿಸಿ ಮಧ್ಯದಲ್ಲಿ ಉದ್ದಕ್ಕೆ ಸೀಳಬೇಕು. ನಂತರ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಆಮ್‌ಚೂರ್ ಪುಡಿ ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಸೀಳಿ ಇಟ್ಟಿರುವ ಬೆಂಡೆಕಾಯಿಯ ಒಳಗೆ ಈ ಒಣ ಮಸಾಲೆ ಪುಡಿಯನ್ನು ಸ್ವಲ್ಪ ಸ್ವಲ್ಪವಾಗಿ ತುಂಬಿಸಬೇಕು.

ನಂತರ ಪ್ಯಾನ್ ಅಥವಾ ತವಾವನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಮಸಾಲೆ ತುಂಬಿದ ಬೆಂಡೆಕಾಯಿಗಳನ್ನು ಪ್ಯಾನ್‌ಗೆ ಹಾಕಿ 3-4 ನಿಮಿಷ ಬೇಯಲು ಬಿಡಬೇಕು. ನಂತರ ಇನ್ನೊಂದು ಬದಿಗೆ ಮಗುಚಿ ಹಾಕಬೇಕು. ಹಾಗೆಯೇ ಎಲ್ಲ ಕಡೆ ತಿರುವುತ್ತಾ ಫ್ರೈ ಮಾಡಿದರೆ, ಮಸಾಲಾ ಬೆಂಡೆಕಾಯಿ ಫ್ರೈ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !