ಸಾಮಾಗ್ರಿಗಳು
ಬೇಳೆ
ಈರುಳ್ಳಿ
ಟೊಮ್ಯಾಟೊ
ಹುಣಸೆಹುಳಿ
ಬೆಲ್ಲ
ಕ್ಯಾರೆಟ್
ಬೀನ್ಸ್
ಕ್ಯಾಪ್ಸಿಕಂ
ಆಲೂಗಡ್ಡೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಬಿಸಿಬೇಳೆಬಾತ್ ಪುಡಿ
ಶೇಂಗಾ
ಪಾಲಕ್
ಅಕ್ಕಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಅಕ್ಕಿ, ಬೇಳೆ, ಈರುಳ್ಳಿ, ಟೊಮ್ಯಾಟೊ, ತರಕಾರಿ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಎರಡು ವಿಶಲ್ ಕುಕ್ಕರ್ ಕೂಗಿಸಿ ನಂತರ ಇದನ್ನು ತಣ್ಣಗಾಗಲು ಬಿಟ್ಟು, ವಿಶಲ್ ತೆಗೆದಮೇಲೆ ಸ್ಮಾಶ್ ಮಾಡಿ
ಆನಂತರ ಇನ್ನೊಂದು ದೊಡ್ಡ ಪಾತ್ರೆಗೆ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗರಣೆ ಮಾಡಿ. ಜೊತೆಗೆ ಘಮಕ್ಕಾಗಿ ಹಿಂಗ್ ಹಾಕಿ.
ಆನಂತರ ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ ನಂತರ ಪಾಲಕ್ ಸೊಪ್ಪನ್ನು ಬಿಸಿನೀರಿನಲ್ಲಿ ಕುದಿಸಿ, ಸೊಪ್ಪನ್ನು ರುಬ್ಬಿ ಅದನ್ನು ಹಾಕಿ
ಅದಾದ ನಂತರ ಬಿಸಿಬೇಳೆ ಬಾತ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಬೆಂದ ಬೇಳೆಯ ಮಿಶ್ರಣವನ್ನು ಹಾಕಿ, ಖಾರದಪುಡಿ ಹಾಕಿ, ಕೊತ್ತಂಬರಿ ಸೊಪ್ಪು, ಹುಣಸೆರಸ, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಕುದಿ ಬಂದ ನಂತರ ಆಫ್ ಮಾಡಿದ್ರೆ ಪಾಲಕ್ ಬಿಸಿಬೇಳೆ ಬಾತ್ ರೆಡಿ.



