ಸಾಮಾಗ್ರಿಗಳು
ಮಿಕ್ಸ್ ಮೊಳಕೆಕಾಳುಗಳು ( ಹೆಸರುಕಾಳು, ಕಡ್ಲೆಕಾಳು, ಹುರುಳಿಕಾಳು, ಶೇಂಗಾ)
ಈರುಳ್ಳಿ – ಒಂದು
ಟೊಮ್ಯಾಟೊ – ಒಂದು
ಹಸಿಮೆಣಸು – ನಾಲ್ಕು
ಕಾಯಿತುರಿ – ಒಂದು ಬಟ್ಟಲು
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಮೆಂತ್ಯೆಸೊಪ್ಪು
ಮಾಡುವ ವಿಧಾನ

ಮೊದಲು ಕುಕ್ಕರ್ಗೆ ಮೊಳಕೆಕಾಳುಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ ಎರಡು ವಿಶಲ್ ಕೂಗಿಸಿಕೊಳ್ಳಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು, ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ, ಅರಿಶಿಣ ಹಾಗೂ ಉಪ್ಪನ್ನು ಹಾಕಿ ಬಾಡಿಸಿ
ನಂತರ ಮೆಂತ್ಯೆಸೊಪ್ಪು, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಆಮೇಲೆ ಬೆಂದ ಕಾಳುಗಳನ್ನು ಹಾಕಿ, ಮಿಕ್ಸ್ ಮಾಡಿ ಮೇಲೆ ಕಾಯಿತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ



