August 24, 2026
Monday, August 24, 2026
spot_img

ಬರೋಬ್ಬರಿ 55 ವರ್ಷಗಳಿಂದ ಜನರನ್ನು ರಂಜಿಸಿದ್ದ ʼಊರ್ವಶಿ ಥಿಯೇಟರ್‌ʼ ಇನ್ನು ನೆನಪು ಮಾತ್ರ!


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೋಬ್ಬರಿ 55 ವರ್ಷಗಳಿಂದ ಬೆಂಗಳೂರು ಜನರನ್ನು ರಂಜಿಸಿದ್ದ ಐಕಾನಿಕ್‌ ಊರ್ವಶಿ ಥಿಯೇಟರ್‌ ಇಂದು ನೆಲಸಮವಾಗಿದೆ. ಲಾಲ್‌ಬಾಗ್‌ ಮುಖ್ಯರಸ್ತೆಯಲ್ಲಿರುವ ಊರ್ವಶಿ ಥಿಯೇಟರ್‌ ಎಷ್ಟೋ ಜನರ ಮೊದಲ ಸಿನಿಮಾ ನೋಡಿದ ಥಿಯೇಟರ್‌. ಈ ಥಿಯೇಟರ್‌ ಇನ್ನು ನೆನಪು ಮಾತ್ರ! ಕಳೆದ ಎಂಟು ವರ್ಷಗಳಿಂದ ಗುತ್ತಿಗೆ ವಿವಾದಲ್ಲಿದ್ದ ಥಿಯೇಟರ್‌ ಇದೀಗ ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶದಂತೆ ನೆಲಸಮವಾಗಲಿದೆ.

ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಸ್ಥಳವನ್ನು ವಾಪಸ್ ಪಡೆದುಕೊಂಡಿದ್ದು, ಈಗಾಗಲೇ ಚಿತ್ರಮಂದಿರವನ್ನು ನೆಲಸಮ ಮಾಡುವ ಕಾರ್ಯ ಜಾರಿಯಲ್ಲಿದೆ. 1970ರಲ್ಲಿ ಡಾ. ರಾಜ್‌ಕುಮಾರ್‌ ಈ ಥಿಯೇಟರ್‌ನ್ನು ಉದ್ಘಾಟನೆ ಮಾಡಿದ್ದರು.

ಸುಮಾರು 55 ವರ್ಷಗಳ ಸುದೀರ್ಘ ಇತಿಹಾಸಿರುವ ಈ ಥಿಯೇಟರ್‌ನಲ್ಲಿ 5,000 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ. ಭಾರತದ ಕೇವಲ 2 ಏಕಪರದೆ ಚಿತ್ರಮಂದಿರಗಳಲ್ಲಿ ಮಾತ್ರ ಲಭ್ಯವಿದ್ದ ಅತ್ಯಾಧುನಿಕ ಸೌಂಡ್ ಟೆಕ್ನಾಲಜಿಯನ್ನು ಊರ್ವಶಿ ಥಿಯೇಟರ್ ಹೊಂದಿತ್ತು. ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್ ಅವಧಿಯು 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. 3 ವರ್ಷ ಕಾಂಟ್ರಾಕ್ಟ್ ಮುಂದುವರಿದಿದೆ ಎಂಬ ಚರ್ಚೆಗಳು ಇದ್ದವು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಈ ಐತಿಹಾಸಿಕ ಚಿತ್ರಮಂದಿರದ ಭವಿಷ್ಯಕ್ಕೆ ಸಂಪೂರ್ಣ ತೆರೆ ಬಿದ್ದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !