August 24, 2026
Monday, August 24, 2026
spot_img

ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಮಿಫೈನಲ್‌ ಪ್ರವೇಶಕ್ಕಾಗಿ ಮಹತ್ವದ ಹೋರಾಟ ನಡೆಸಿದ ಭಾರತಕ್ಕೆ ಅರ್ಜೆಂಟೀನಾ ವಿರುದ್ಧ ನಿರಾಸೆಯ ಫಲಿತಾಂಶ ಎದುರಾಗಿದೆ. 3-5 ಗೋಲುಗಳ ಅಂತರದಲ್ಲಿ ಸೋಲು ಕಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ, ಟೂರ್ನಿಯ ಮುಂದಿನ ಹಂತಕ್ಕೆ ತಲುಪುವ ಅವಕಾಶವನ್ನು ಕಳೆದುಕೊಂಡಿದೆ. ಎರಡನೇ ಸುತ್ತಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಇದೀಗ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಆರಂಭದಲ್ಲೇ ಅರ್ಜೆಂಟೀನಾ ಮೇಲುಗೈ

ಪಂದ್ಯದ ಮೊದಲ ನಿಮಿಷದಲ್ಲೇ ಅರ್ಜೆಂಟೀನಾ ಗೋಲಿನ ಖಾತೆ ತೆರೆದಿತ್ತು. ಬಳಿಕ ಮತ್ತೊಂದು ಗೋಲು ಸೇರಿಸಿಕೊಂಡು ಭಾರತಕ್ಕೆ ಆರಂಭಿಕ ಒತ್ತಡ ತಂದಿತು. ಆದರೆ ಸುಖ್ಜೀತ್ ಸಿಂಗ್ ಎರಡು ಗೋಲು ಬಾರಿಸುವ ಮೂಲಕ ಭಾರತ ಪಂದ್ಯಕ್ಕೆ ಮರಳುವ ಭರವಸೆ ಮೂಡಿಸಿದರು.

ಭಾರತದ ಹೋರಾಟಕ್ಕೆ ಸಿಗದ ಫಲ

ಅರ್ಜೆಂಟೀನಾ ಪರ ತೋಮಸ್ ಡೊಮೆನ್ ಎರಡು ಗೋಲು ಗಳಿಸಿದರೆ, ಜೋಕ್ವಿನ್ ಟೊಸ್ಕಾನಿ ಹಾಗೂ ನಿಕೋಲಸ್ ಡೆಲ್ಲಾ ಟೊರೆ ತಲಾ ಒಂದು ಗೋಲು ದಾಖಲಿಸಿದರು. ಲ್ಯೂಕಾಸ್ ಟೊಸ್ಕಾನಿ ಕೂಡ ಗೋಲು ಬಾರಿಸಿದರು. ಭಾರತ ಪರ ಸುಖ್ಜೀತ್ ಸಿಂಗ್ ಎರಡು ಹಾಗೂ ಹಾರ್ದಿಕ್ ಸಿಂಗ್ ಒಂದು ಗೋಲು ಗಳಿಸಿದರು. ಆದರೆ ಎದುರಾಳಿಯ ಆಕ್ರಮಣಕಾರಿ ಆಟಕ್ಕೆ ತಕ್ಕ ಉತ್ತರ ನೀಡಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ:

ಇನ್ನು 7ನೇ ಸ್ಥಾನಕ್ಕಾಗಿ ಹೋರಾಟ

ಸೆಮಿಫೈನಲ್‌ ಅವಕಾಶ ಕಳೆದುಕೊಂಡಿರುವ ಭಾರತ ಇದೀಗ 7ನೇ ಸ್ಥಾನಕ್ಕಾಗಿ ನಡೆಯುವ ಪ್ಲೇಆಫ್ ಪಂದ್ಯಕ್ಕೆ ಸಜ್ಜಾಗಬೇಕಿದೆ. ಆಗಸ್ಟ್ 28ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !