ಸಾಮಾಗ್ರಿಗಳು

ಬೀಟ್ರೂಟ್ ರಸ
ಉಪ್ಪು
ಮೆಂತ್ಯೆ ಸೊಪ್ಪು
ಓಂಕಾಳು
ಹಸಿಮೆಣಸಿನಕಾಯಿ
ಕಡ್ಲೆಹಿಟ್ಟು
ಎಣ್ಣೆ
ಮಾಡುವ ವಿಧಾನ

ಮೊದಲು ಬೌಲ್ಗೆ ಗೋಧಿಹಿಟ್ಟನ್ನು ಹಾಕಿಕೊಳ್ಳಿ. ಆನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಓಂಕಾಳು, ಹಸಿಮೆಣಸಿನಕಾಯಿ, ಕಡ್ಲೆಹಿಟ್ಟು ಹಾಗೂ ಬೀಟ್ರೂಟ್ ರಸವನ್ನು ಹಾಕಿ ಮಿಕ್ಸ್ ಮಾಡಿ
ಕೈಯಲ್ಲಿ ಬೆಚ್ಚಗಿನ ನೀರು ಹಾಕುತ್ತಾ ಚೆನ್ನಾಗಿ ಕಲಸಿ
ಕಡೆಗೆ ಎಣ್ಣೆ ಹಾಕಿ ಚೆನ್ನಾಗಿ ಮಿದ್ದು ತಕ್ಷಣವೇ ಚಪಾತಿ ಮಾಡಬಹುದು, ಇಲ್ಲವಾದಲ್ಲಿ ಹದಿನೈದು ನಿಮಿಷ ಕಾದು ಮಾಡಬಹುದು.
ಕಾದ ತವಾಗೆ ಬೆಣ್ಣೆ ಅಥವಾ ತುಪ್ಪ ಹಾಕಿ ಲಟ್ಟಿಸಿದ ಚಪಾತಿ ಹಾಕಿ ಎರಡೂ ಕಡೆ ಬೇಯಿಸಿ, ನಂತರ ತುಪ್ಪ ಸವರಿ ತಕ್ಷಣ ಮಡಚಿ ಇಟ್ಟರೆ ಚಪಾತಿ ಮೆತ್ತಗೆ ಇರುತ್ತದೆ.



