ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಿಶ್ವದಾದ್ಯಂತ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಶೋಗಳು ಆರಂಭವಾಗಿದ್ದು, ಹೌಸ್ಫುಲ್ ಆಗಿವೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಇದೆಂಥಾ ಸಿನಿಮಾ ತಲೆ ಎಲ್ಲ ಕೆಟ್ಟು ಹೋಯ್ತು ಎಂದು ರಿವ್ಯೂ ಕೊಟ್ಟಿದ್ದಾರೆ.
ಸಿನಿಮಾ ಮೆಚ್ಚಿ ಹತ್ತಕ್ಕೆ ಹತ್ತೂ ಪಾಯಿಂಟ್ಸ್ ನೀಡುತ್ತೇವೆ ಎಂದು ಹೇಳುವವರ ಮಧ್ಯೆ ಮೂರು ಗಂಟೆ ಕೂತಿದ್ದೇ ಟಾರ್ಚರ್ ಎಂದು ಹೇಳಿದವರೂ ಇದ್ದಾರೆ. ಯಶ್ ಮೇಲಿನ ಅಭಿಮಾನಕ್ಕೆ ಸಿನಿಮಾ ಥಿಯೇಟರ್ಗೆ ಕಾಲಿಟ್ಟೆವು. ಆದರೆ ಸಿನಿಮಾ ನೋಡಿ ಯಶ್ ಇಮೇಜ್ ಬಗ್ಗೆ ಬೇಸರವಾಗುತ್ತಿದೆ. ಗೀತು ಮೋಹನ್ದಾಸ್ ಡೈರೆಕ್ಷನ್ ಇಷ್ಟವಾಗಿಲ್ಲ. ಕ್ಯಾರೆಕ್ಟರ್ಗಳಿಗೆ ಇಂಟ್ರಡಕ್ಷನ್ ಇಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸಿಕ್ಕಾಪಟ್ಟೆ ಬೋರ್ ಆಯ್ತು, ಒಂದು ಕ್ಯಾರೆಕ್ಟರ್ನಿಂದ ಇನ್ನೊಂದು ಕ್ಯಾರೆಕ್ಟರ್ನ್ನು ಕನೆಕ್ಟ್ ಮಾಡಿಕೊಳ್ಳುವುದರಲ್ಲೇ ಸಿನಿಮಾ ಮುಗಿದು ಹೋಗಿತ್ತು. ಸ್ಟೋರಿ ಚೆನ್ನಾಗಿಲ್ಲ. ವಿಶುಯಲ್ಸ್ ಚೆನ್ನಾಗಿದೆ, ಟೆಕ್ನಿಕಲ್ ಕ್ವಾಲಿಟಿ ಅದ್ಭುತ. ಆದರೆ ಬರುತ್ತಾ ಬರುತ್ತಾ ಬೋರ್ ಆಗುತ್ತದೆ. ಈ ಸಿನಿಮಾ ಮೇಲೆ ಯಶ್ ನಾಲ್ಕು ವರ್ಷಗಳನ್ನು ವೇಸ್ಟ್ ಮಾಡಿಕೊಳ್ಳಬಾರದಿತ್ತು ಎಂದಿದ್ದಾರೆ. ಕೆಟ್ಟ ಡಿಸಾಸ್ಟರ್ ಸೃಷ್ಟಿ ಮಾಡಿದ್ದಾರೆ. ಏನೂ ಚೆನ್ನಾಗಿಲ್ಲ. ಯಾವ ಕನೆಕ್ಷನ್ ಸಿಗೋದಿಲ್ಲ ಎಂದಿದ್ದಾರೆ.
ಸಿನಿಮಾ ಮಾಡೋದು ನಿರ್ದೇಶಕನ ಜಾಣ್ಮೆ, ಪಾತ್ರಕ್ಕೆ ಜೀವ ತುಂಬೋದು ಆಕ್ಟರ್ಗಳ ಕೆಲಸ. ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ ನೀವು ಹೇಗಾದರೂ ಸ್ವೀಕರಿಸಿ. ಕೆಲವರಿಗೆ ಸಿನಿಮಾ ಇಷ್ಟವಾಗಬಹುದು. ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಸಿನಿಮಾ ಬಗ್ಗೆ ಬೇಕಂತಲೇ ಅಪಪ್ರಚಾರ ಬೇಡ ಹಾಗೇ ಸಿನಿಮಾದ ಸೀನ್ಗಳನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ಸಿನಿ ತಂಡ ಮನವಿ ಮಾಡಿದೆ.



